ಬೆಳಗಾವಿ ನಗರದಲ್ಲಿ ಕರುನಾಡ ವಿಜಸೇನೆ ಜಿಲ್ಲಾ ಘಟಕ ಬೆಳಗಾವಿ ಜಿಲ್ಲೆ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಹೌದು ಕರುನಾಡ ವಿಜಯಸೇನೆ ಜಿಲ್ಲಾ ಘಟಕ ಬೆಳಗಾವಿ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಾಯಣ್ಣ ಉತ್ಸವ ಪ್ರಯುಕ್ತ ಬೃಹತ್ ಶೋಭಾಯಾತ್ರೆಯನ್ನೂ ಕೂಡ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಟ್ರ್ಯಾಕ್ಟರ್‍ನಲ್ಲಿ ಬೃಹತ್ ರಾಯಣ್ಣನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ವಿವಿಧ ಮಂಗಳ ವಾದ್ಯಗಳೊಂದಿಗೆ ನೂರಾರು ಜನ ರಾಯಣ್ಣನ ಅಭಿಮಾನಿಗಳು ರ್ಯಾಲಿಯಲ್ಲಿ ಭಾಗಿಯಾಗಿದ್ದರು.ಈ ವೇಳೆ ವಿವಿಧ ಸಂಘಟನೆಗಳ ಮಹಿಳಾ ಮಣಿಗಳು ಸಾಂಪ್ರದಾಯಿಕ ಉಡುಪುಗಳಲ್ಲಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ರ್ಯಾಲಿಯು ಉದ್ಯಮಬಾಗದ ಪೀರನವಾಡಿಯ ರಾಯಣ್ಣ ಪುತ್ಥಳಿಯಿಂದ ಪ್ರಾರಂಭವಾಗಿ ಕಾಂಗ್ರೆಸ್ ರಸ್ತೆ, ಕ್ಯಾಂಪ್ ಏರಿಯಾ, ಕಾಲೇಜು ರಸ್ತೆ, ಮೂಲಕ ಸಾಗಿ ಗಾಂಧಿ ಭವನವನ್ನು ತಲುಪಿತು.
Laxmi News 24×7