ಬೆಳಗಾವಿ ಗಾಲ್ಫ್ ಮೈದಾನದಲ್ಲಿ 25ನೇ ದಿನವೂ ಚಿರತೆಯ ಕಾರ್ಯಾಚರಣೆ ಮುಂದುವರಿದಿದೆ. ಗಾಲ್ಫ್ ಮೈದಾನದ ಉತ್ತರ ಧಿಕ್ಕಿನ ನೀರಿನ ಹೊಂಡದ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.
ಹೆಜ್ಜೆ ಗುರುತು ಜಾಡು ಹಿಡಿದು ಶೋಧ ಕಾರ್ಯವನ್ನು ಸಿಸಿಎಫ ಮಂಜುನಾಥ ಚವ್ಹಾಣ, ಡಿಎಫ್ಓ ಡಾ.ಅಂಥೋನಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದ ತಂಡದಿಂದ ಮಾಡಲಾಗುತ್ತಿದೆ.
ಇನ್ನು ಹೆಜ್ಜೆ ಗುರುತು ಪತ್ತೆ ಸ್ಥಳಕ್ಕೆ ಅರವಳಿಕೆ ತಜ್ಞರು ಬಂದಿದ್ದು. ಹನುಮಾನ್, ಜಾಧವ ನಗರ ಸಂಪರ್ಕಿಸುವ ಡಬಲ್ ರಸ್ತೆ ಸುತ್ತಲಿನ ಸಿಬ್ಬಂದಿ ಅರ್ಲಟ್ ಆಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕೊಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೊಂದೆಡೆ ಆನೆಗಳಿಂದ ಕೊಂಬಿಂಗ್ ನಡೆಯುತ್ತಿದೆ.