Breaking News

ಕೈ ದುರಹಂಕಾರಕ್ಕೆ ಹಿರಿಯರು ಪಕ್ಷ ತೊರೆದಿದ್ದಾರೆ : ಸಚಿವ ಜೋಶಿ ವ್ಯಂಗ್ಯ

Spread the love

ಧಾರವಾಡ : ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ದುರಹಂಕಾರ ಮತ್ತು ಭೌದ್ದಿಕ ದಿವಾಳಿಕೋರತನದಿಂದಲೇ ಹಿರಿಯರು ಪಕ್ಷ ತೊರೆಯುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

 

ತಾಲೂಕಿನ ಮುಗದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಗುಲಾಬ್ ನಬೀ ಅಜಾದ್ ಈಗ ಪಕ್ಷ ತೊರೆದಿದ್ದಾರೆ. ಈ ಹಿಂದೆಯೂ ಸಾಕಷ್ಟು ಹಿರಿಯ ನಾಯಕರು ಪಕ್ಷದ ದುರಾಡಳಿತದಿಂದ ಮನನೊಂದು ಹೊರ ಬಂದಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅನುಭವಿಸಿ ಈಗ ತೊರೆದಿದ್ದಾರೆ ಎಂಬಂತೆ ಸಾಕಷ್ಟು ಪ್ರತಿಕ್ರಿಯೆ ಬಂದಿವೆ. ಪಕ್ಷದಲ್ಲಿ ಸ್ಥಾನಮಾನ ಕೊಟ್ಟಿದ್ದೀರಾ ಅಂದರೆ ಆ ಸ್ಥಾನಮಾನ ಅವಧಿ ಮುಗಿದ ಬಳಿಕವೂ ಯಾವುದೇ ವ್ಯಕ್ತಿಯಾದರೂ ಸರಿಯೇ ಅವರ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅಲ್ಲಿನ ನಾಯಕರು, ಅಧ್ಯಕ್ಷರು ಆ ರೀತಿ ನಡೆದುಕೊಳ್ಳಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ದುರಹಂಕಾರ ನಡೆಯಿಂದ ಮನನೊಂದು ಪಕ್ಷ ತೊರೆದಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಮಾಧ್ಯಮಗಳು ಹೇಳುತ್ತಿವೆ ಹೊರತು ನಾವಂತೂ ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಅವಽಯು ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಆದರೆ ಮೂರು ವರ್ಷವಾದ ಬಳಿಕ ಬದಲಾವಣೆ ಮಾಡಲೇಬೇಕು ಅಂತ ಏನಿಲ್ಲ. ಆದರೆ ಮಾಧ್ಯಮಗಳೇ ನಾಳೆ, ನಾಡಿದ್ದು ಬದಲಾವಣೆ ಆಗುತ್ತಾರೆ ಎಂಬುದಾಗಿ ಹೇಳುತ್ತಿವೆ ಅಷ್ಟೇ ಹೊರತು ನಾವಂತೂ ಚರ್ಚೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಪಕ್ಷದ ಹಿರಿಯರು ಆಗಿರುವ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕರಾಗಿದ್ದಾರೆ. ಹೀಗಾಗಿ ಸಹಜವಾಗಿ ದೆಹಲಿಗೆ ತೆರಳಿ ಪ್ರದಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದು, ಈ ಬಗ್ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಮಾರ್ಕೋಪೋಲೋ ಹಾಗೂ ಕಾರ್ಮಿಕರ ಮಧ್ಯೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಈಗಾಗಲೇ ರಾಜ್ಯದ ಸಚಿವರೊಂದಿಗೆ ಮಾತನಾಡಿದ್ದು, ಇನ್ನೊಂದು ಸಲ ಕುಳಿತು ಬಗೆಹರಿಸಲು ಹೇಳಿದ್ದೇನೆ. ಇದು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವ ಕಾರಣ ಸಂಬಂಧಪಟ್ಟವರಿಗೆ ಎಲ್ಲರಿಗೂ ಮಾತನಾಡಿದ್ದು, ಈ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಿದ್ದೇನೆ. ಆದರೆ ಈ ಸಮಸ್ಯೆ ಬಗೆಹರಿಸಲು ಎರಡೂ ಬಣದಿಂದ ಒಂದು ಹಜ್ಜೆ ಮುಂದೆ ಬರಬೇಕು. ಎರಡೂ ಕೈ ಜೋಡಿಸಿದಾಗಲೇ ಚಪ್ಪಾಳೆ. ಹೀಗಾಗಿ ಕೈಗಾರಿಕಾ ವಾತಾವರಣ ಹದಗೆಡದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದರು.

ಚಿತ್ರದುರ್ಗದ ಮುರುಘಾ ಶರಣರ ವಿರುದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ದೂರು ದಾಖಲಿಸಿದ್ದು, ಈ ಬಗ್ಗೆ ಈಗಾಗಲೇ ತನಿಖೆ ಕೂಡ ಆರಂಭಗೊಂಡಿದೆ. ಹೀಗಾಗಿ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ನಾಡಿನ ಪ್ರತಿಷ್ಠಿತ ಶ್ರೀಗಳಾಗಿದ್ದು, ಹೀಗಾಗಿ ಸೂಕ್ತವಾದ ನ್ಯಾಯಯುತ ತನಿಖೆ ಆಗಲಿ. ಅಲ್ಲಿಯವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂತಲೇ ಇಲ್ಲ.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ