ಬೆಂಗಳೂರು: ಆಸ್ತಿ ನೋಂದಣಿಯ ಹಲವು ತೊಡಕುಗಳನ್ನು ನಿವಾರಿಸಲು ಮುಂದಾದ ಸರಕಾರ ನ. 1ರಿಂದ ಹೊಸ ನಿಯಮ ಜಾರಿಗೊಳಿಸಲಿದೆ.
ಪಾಸ್ ಪೋರ್ಟ್ ಪಡೆಯುವ ಮಾದರಿಯ ವೆಬ್ ಆಧಾರಿತ ಸೇವೆ ಇದಾಗಿದ್ದು ತರುವ ಮೂಲಕ 20 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ರಾಜ್ಯ ಸರಕಾರ ತನ್ನ ಇ- ಆಡಳಿತ ಇಲಾಖೆ ಅಧೀನ ಸಂಸ್ಥೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ‘ಕಾವೇರಿ-2’ ತಂತ್ರಾಂಶವನ್ನು ರೂಪಿಸಿದೆ.
ಸಂಪೂರ್ಣ ತಾಂತ್ರಿಕ ದೋಷರಹಿತವಾಗಿರುವ ಇದರಲ್ಲಿ ಆಸ್ತಿ ನೋಂದಣಿ ಬಯಸುವವರು ಮನೆಯಲ್ಲೇ ಕುಳಿತು ತಮ್ಮ ನೋಂದಣಿ ಪ್ರಕ್ರಿಯೆ ಮುಗಿಸಬಹುದಾಗಿದೆ. ಇದರಿಂದ ಅನಗತ್ಯ ಖರ್ಚು, ಸಮಯದ ಅಪವ್ಯಯಕ್ಕೆ ಕಡಿವಾಣ ಹಾಕುವುದರ ಜೊತೆಗೆ ಭ್ರಷ್ಟಾಚಾರ, ಅನಧಿಕೃತ ಏಜೆಂಟ್ ಗಳಿಂದ ಸುಲಿಗೆ, ವ್ಯವಹಾರದಲ್ಲಿ ಮೋಸಗಾರಿಕೆ ಇತ್ಯಾದಿ ಅಕ್ರಮಗಳಿಗೂ ಬ್ರೇಕ್ ಬೀಳಿದೆ.
ಇದರಲ್ಲಿ ಆಸ್ತಿ ಮಾಡುವವರು ವಯಸ್ಸು, ಆಸ್ತಿಯ ಮೌಲ್ಯ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳ ರಿಯಲ್ ಎಸ್ಟೇಟ್ ಸ್ಥಿತಿಗತಿಗಳು, ದರಗಳ ಮಾಹಿತಿ ಕೂಡ ನೀಡುತ್ತದೆ.
ಕಾವೇರಿ- 2 ತಂತ್ರಾಂಶದ ಪ್ರಥಮ ಪ್ರಯೋಗ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆಯಲಿದ್ದು ರಾಜ್ಯದ ಎಲ್ಲೆಡೆ ಬರುವ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಾರಂಭಗೊಳ್ಳಲಿದೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸ