ನವದೆಹಲಿ: ರಾಜ್ಯದ 7 ಜನ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ ನೀಡಿ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಸಚಿನ್ ಘೋರ್ಪಡೆ, ವಿಕ್ರಂ ಅಮಟೆ, ಸಂಜೀತ್ ವಿ.ಜೆ., ರಾಮ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ ನೇಮಗೌಡ, ಗೋಪಾಲ ಎಂ. ಬ್ಯಾಕೋಡ್ ಹಾಗೂ ಮಹಾನಿಂಗ ನಂದಗಾವಿ ಅವರು ಸರಕಾರದ ಆದೇಶದನ್ವಯ ಐಪಿಎಸ್ ಕರ್ನಾಟಕ ಕೆಡರ್ ಅಧಿಕಾರಿಗಳಾಗಿ ಮೇಲ್ದರ್ಜೆಗೇರಿದವರು.
ಈ ಎಲ್ಲ ಅಧಿಕಾರಿಗಳು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಾನಾ ಹುದ್ದೆಗಳನ್ನು ಖಾಲಿ ಇದ್ದ ಸ್ಥಾನಗಳಿಗೆ ಬಡ್ತಿ ಮೂಲಕ ಐಪಿಎಸ್ ದರ್ಜೆಗೇರಿದ್ದಾರೆ.
ಈ ಕುರಿತು ಭಾರತ ಸರಕಾರದ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಸಂಜೀವಕುಮಾರ್ ಆಗಸ್ಟ್ 12ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಿಕ್ರಂ ಅಮಟೆ ಮತ್ತು ಮಹಾನಿಂಗ ನಂದಗಾವಿ ಬೆಳಗಾವಿಯವರಾಗಿದ್ದು, ಅಮಟೆ ಡಿಸಿಪಿಯಾಗಿ ಈ ಹಿಂದೆ ಕಲಸ ನಿರ್ವಹಿಸಿದ್ದರೆ, ನಂದಗಾವಿ ಸಧ್ಯ ಹೆಚ್ಚುವರಿ ಎಸ್ಪಿಯಾಗಿದ್ದಾರೆ.