ಮುಂಬೈ: ಶಿವಸೇನಾ ಮುಖಂಡರೊಬ್ಬರು ಖಾಸಗಿ ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಮಹಾರಾಷ್ಟ್ರದ ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ ಬಡಿಸಿದ ಕಾರಣಕ್ಕೆ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರು ಅಡುಗೆ ವ್ಯವಸ್ಥಾಪಕನನ್ನು ನಿಂದಿಸಿ ಅವರಿಗೆ ಎಲ್ಲರ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದರು.
ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಾರ್ಹವೆಂದರೆ, ಬಂಗಾರ್ ಅವರು ಈ ಘಟನೆಗೆ ಕೆಲವೇ ನಿಮಿಷ ಮೊದಲು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿಬಿರ ಸೇರಿಕೊಂಡರು.
Laxmi News 24×7