Breaking News

ಕಾಸು ಕೊಟ್ಟರೆ ಪ್ರಾಯೋಗಿಕ ಪರೀಕ್ಷೆ ಪಾಸ್..

Spread the love

ದಾವಣಗೆರೆ: ಪಿಎಸ್​ಐ ನೇಮಕಾತಿ ಹಗರಣದ ನಂತರ ಭ್ರಷ್ಟಾಚಾರದ ವಾಸನೆ ಇದೀಗ ಐಟಿಐ ಪರೀಕ್ಷೆಗಳತ್ತಲೂ ಹರಡಿದೆ. ಮೂರು ಸಾವಿರ ರೂ. ಕೈಗಿಟ್ಟರೆ ಸಲೀಸಾಗಿ ನಕಲು ಮಾಡಬಹುದು! ಪ್ರಯೋಗಾಲಯದಲ್ಲಿ ಪರೀಕ್ಷಾ ಮೇಲ್ವಿಚಾರಕರ ಎದುರು ಯಂತ್ರಗಳ ದುರಸ್ತಿ ಹಾಗೂ ಜೋಡಣೆ ಮಾಡುವುದು ನಿಯಮ.

ಆದರೆ, ಹೊರಗಿನಿಂದ ರೆಡಿ ಮಾಡಿಸಿಕೊಂಡು ಬಂದವರಿಗೂ ಅಂಕಗಳು ಗ್ಯಾರಂಟಿ!

ದಾವಣಗೆರೆ ಜಿಲ್ಲೆಯ ಮಾಯಕೊಂಡದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಐಟಿಐ ಫಿಟ್ಟರ್ ವಿಭಾಗದ ಎರಡನೇ ವರ್ಷದ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆ.3ರಂದು ಈ ಪರೀಕ್ಷೆ ಈ ನಡೆದಿತ್ತು.

ಪರೀಕ್ಷೆಯಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ, ಅಕ್ರಮ ನಡೆದಿದೆ ಎಂದು ಆಯುಕ್ತಾಲಯ ದಲ್ಲಿ ದೂರು ದಾಖಲಾಗಿದೆ. ಪರೀಕ್ಷಾ ಪ್ರಕ್ರಿಯೆ, ಜಾಗೃತ ದಳದ ಕಾರ್ಯನಿರ್ವಹಣೆ ಕುರಿತು ವಿವರ ಕೇಳಲಾಗಿದೆ. ಅಕ್ರಮದ ವಿಡಿಯೋ ಮಾಡಿದವರೂ ಧೈರ್ಯದಿಂದ ದೂರು ನೀಡಬೇಕು.

| ಕೆ. ಜ್ಯೋತಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತೆ

ಆ ದಿನ ಎಲ್ಲರ ಕಣ್ಣು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಮೇಲೆ ಇರಬಹುದಾದ ಸಾಧ್ಯತೆ ಗಮನಿಸಿ ಈ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕಾಲೇಜಿನ ನಾಲ್ಕು ಕೊಠಡಿಗಳಲ್ಲಿ ಪರೀಕ್ಷೆ ನಡೆದಿದ್ದು. ವಿದ್ಯಾರ್ಥಿಗಳು ಯಾರ ಭಯವೂ ಇಲ್ಲದೆ ಸಾಮೂಹಿಕ ನಕಲು ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಲಾಗಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ