ಮುಂಬೈ: ಹಣದುಬ್ಬರ ಹಾಗೂ ರೂಪಾಯಿ ಅಪಮೌಲ್ಯ ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳು ತನ್ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರವನ್ನು(ರೆಪೊ) 0.50 ರಷ್ಟು ಹೆಚ್ಚಳ ಮಾಡಿದೆ.
ಮೂರು ತಿಂಗಳಲ್ಲಿ ರೆಪೊ ದರ ಶೇಕಡ 1.4 ರಷ್ಟು ಏರಿಕೆಯಾಗಿದ್ದು, ಇದರಿಂದಾಗಿ ಬ್ಯಾಂಕುಗಳಿಂದ ವೈಯಕ್ತಿಕ, ಗೃಹ, ವಾಹನ ಇನ್ನಿತರೆ ಸಾಲ ಪಡೆದ ಗ್ರಾಹಕರು ಹೆಚ್ಚಿನ ಬಡ್ಡಿ ಪಾವತಿಸುವುದು ಅನಿವಾರ್ಯವಾಗಿದೆ.
ಶೇಕಡ 7ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದವರು ಶೇಕಡ 8.4 ರಷ್ಟು ಬಡ್ಡಿ ಪಾವತಿಸಬೇಕಿದೆ. ಇಎಂಐ ಮೊತ್ತ ಹೆಚ್ಚಾಗಲಿದೆ.
Laxmi News 24×7