ಬೆಳಗಾವಿ: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ರಾಜಕೀಯ ನಿವೃತ್ತಿ ಪಡೆಯಬೇಕು.
ಔಟ್‌ಡೇಟೆಡ್ ಮಾಡಲ್‌ಗಳು ಎಲ್ಲ ಆಯ್ತು. ಐದು ವರ್ಷ ಜನ ಭಾರ ಹೊತ್ತುಕೊಂಡಿದ್ದರು. ಇನ್ನು ಯಾರು ಭಾರ ಹೊರುವವರು ಎಂದು ಟೀಕಿಸಿದರು. ಜತೆಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದರು.
ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ ಇದ್ದರೂ ರಾಜಕೀಯ ಕಾರ್ಯಕ್ರಮವೇ. ಆದರೆ ಒಳ್ಳೆಯ ವಿಚಾರ ಹಾಗೂ ಒಳ್ಳೆಯ ಉದ್ದೇಶಕ್ಕಾಗಿ ಏನು ಮಾಡಿ ದರೂ ಒಳ್ಳೆಯದು ಎಂದರು.