Breaking News

ಗನ್​ ಇಟ್ಟುಕೊಳ್ಳಲು ಸಲ್ಮಾನ್​ ಖಾನ್​ಗೆ ಸಿಕ್ತು ಲೈಸೆನ್ಸ್​; ಕೊಲೆ ಬೆದರಿಕೆ ಬೆನ್ನಲ್ಲೇ ವಿಶೇಷ ಅನುಮತಿ

Spread the love

ಕೊಲೆ ಬೆದರಿಕೆ ಬಂದ ಬಳಿಕ ಸಲ್ಮಾನ್​ ಖಾನ್ ಅವರು ಭದ್ರತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಬುಲೆಟ್​ ಪ್ರೂಫ್​ ಕಾರಿನ ಜತೆ ಅವರೀಗ ಗನ್​ ಲೈಸೆನ್ಸ್​ ಪಡೆದುಕೊಂಡಿದ್ದಾರೆ.ಬಾಲಿವುಡ್​ ನಟ ಸಲ್ಮಾನ್​ ಖಾನ್​ (Salman Khan) ಅವರು ಆತ್ಮ ರಕ್ಷಣೆಗಾಗಿ ಗನ್​ ಇಟ್ಟುಕೊಳ್ಳಲು ಲೈಸೆನ್ಸ್ ​ ಪಡೆದಿದ್ದಾರೆ.

ಕೆಲವೇ ದಿನಗಳ ಹಿಂದೆ ಅವರಿಗೆ ಮತ್ತು ಅವರ ತಂದೆ ಸಲೀಮ್​ ಖಾನ್​ಗೆ ಕೊಲೆ ಬೆದರಿಕೆ (Death Threat) ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸ್​ ಠಾಣೆ ಮೆಟ್ಟಿಲು ಏರಿದ್ದರು. ಪ್ರಕರಣವನ್ನು ಪರಿಶೀಲಿಸಿದ ನಂತರ ಅವರಿಗೆ ವಿಶೇಷ ಪರವಾನಗಿ ನೀಡಲಾಗಿದೆ. ಇನ್ಮುಂದೆ ಸಲ್ಮಾನ್​ ಖಾನ್​ ಗನ್​ ಇಟ್ಟುಕೊಳ್ಳಲಿದ್ದಾರೆ.

ಕಳೆದ ತಿಂಗಳು ಮುಂಬೈ ಪೊಲೀಸ್​ ಕಮಿಷನರ್​ ಭೇಟಿ ಮಾಡಿದ್ದಸಲ್ಮಾನ್ ಖಾನ್​ಅವರು ದೂರು ನೀಡಿದ್ದರು. ಗನ್​ ಲೈಸೆನ್ಸ್​ (Gun License) ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ನಂತರ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿದ ಅಧಿಕಾರಿಗಳು ಪರವಾನಗಿ ನೀಡಿದ್ದಾರೆ.

‘ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ರೀತಿ ನಿಮ್ಮನ್ನೂ ಮುಗಿಸುತ್ತೇವೆ’ ಎಂದು ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಆ ಘಟನೆ ಬಳಿಕ ತಮ್ಮ ಭದ್ರತೆ ಬಗ್ಗೆ ಸಲ್ಲು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.

ಬುಲೆಟ್​ ಪ್ರೂಫ್​ ಕಾರಿನಲ್ಲಿ ಓಡಾಡಲು ಶುರುಮಾಡಿದ್ದಾರೆ. ಅದರ ಜೊತೆಗೆ ಅವರು ಗನ್​ ಇಟ್ಟುಕೊಳ್ಳಲು ಲೈಸೆನ್ಸ್​ ಕೂಡ ಪಡೆದಿದ್ದಾರೆ. ಲೈಸೆನ್ಸ್​ ಸಿಕ್ಕಿರುವ ವಿಷಯವನ್ನು ಮುಂಬೈ ಪೊಲೀಸರು ಖಚಿತ ಪಡಿಸಿದ್ದಾರೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ