ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮೊದಲನೇ ಗೇಟ್ ಬಳಿ ಶನಿವಾರ, ರೈಲು ಡಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಿಳಕವಾಡಿಯ ಸೋಮವಾರಪೇಟೆಯ ನಿವಾಸಿ ಪ್ರಭಾಕರ ಮುಕುಂದ ಕಬ್ಬೆ (86) ಮೃತಪಟ್ಟವರು. ಪ್ರಭಾಕರ ಅವರು ಟಿಳಕವಾಡಿಯಲ್ಲಿರುವ ಮೊದಲನೇ ರೈಲ್ವೆ ಗೇಟ್ ದಾಟುತ್ತಿದ್ದರು.
ಅದೇ ಕಾಲಕ್ಕೆ ರೈಲು ವೇಗವಾಗಿ ಬಂತು. ರೈಲಿನ ಶಬ್ದ ಅವರಿಗೆ ಕೇಳಸದ ಕಾರಣ ಹಳಿಗಳಿಂದ ಬೇಗ ಸರಿಯಲಿಲ್ಲ. ನಿಧಾನವಾಗಿ ಹಳಿ ದಾಟುವಷ್ಟರಲ್ಲಿ ರೈಲು ಬಂದು ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ವೃದ್ಧ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.