ಬೆಳಗಾವಿ ನಗರದಲ್ಲಿ ಮತ್ತೆ ಮಳೆರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಕಳೆದ ಒಂದು ವಾರದಿಂದ ಸುಮ್ಮನಿದ್ದ ವರುಣರಾಯ ಮತ್ತೆ ಇಂದು ಮಧ್ಯಾಹ್ನ ಆರ್ಭಟಿಸಿದ್ದಾನೆ. ವರುಣನ ಆರ್ಭಟಕ್ಕೆ ಕುಂದಾನಗರಿಯ ರಸ್ತೆಗಳಲ್ಲೆಲ್ಲ ಕ್ಷಣಕಾಲದಲ್ಲಿ ನೀರೋ ನೀರು ಎನ್ನುವಂತಾಗಿತ್ತು.
ಹೌದು ಬೆಳಗಾವಿಯಲ್ಲಿ ಕಳೆದ ಒಂದು ತಿಂಗಳಿನಿಂದ ಚೆನ್ನಾಗಿತ್ತು ಮಳೆಯಾಗಿತ್ತು. ಮಳೆಯ ಆರ್ಭಟಕ್ಕೆ ಜನ ಸಾಕಷ್ಟು ತೊಂದರೆಗೊಳಗಾಗಿದ್ದರು. ಆದರೆ ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜನಜೀವನ ಎಥಾ ಸ್ಥಿತಿಗೆ ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಗರದಲ್ಲಿ ಇಂದು ಮಧ್ಯಾಹ್ನ 3:30 ರ ಸುಮಾರಿಗೆ ಮಳೆರಾಯ ತನ್ನ ಆರ್ಭಟ ಮೆರೆದಿದ್ದಾನೆ.
ಬಿರುಗಾಳಿ ಸಮೇತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಪ್ರಮುಖ ಸ್ಥಳಗಳಲ್ಲಿ ನೀರೋ ನೀರು. ರಸ್ತೆಗಳ ಮೇಲೆಲ್ಲಾ ಸಾಕಷ್ಟು ನೀರು ಹರಿದಿದ್ದು, ರಸ್ತೆಗಳೆಲ್ಲ ಈಜು ಕೊಳಗಳಂತಾಗಿದ್ದವು.
ನಗರದಲ್ಲಿ ಎರಡು ಘಂಟೆಗಳ ಕಾಲ ಸುರಿದ ಈ ಧಾರಾಕಾರ ಮಳೆಗೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ರಸ್ತೆಯ ಮೇಲೆಲ್ಲಾ ಮಳೆಯ ನೀರು ಪ್ರವಾಹದ ರೀತಿಯಲ್ಲಿ ಹರಿದಾಡಿತು. ಈ ವೇಳೆ ಬೈಕ್ ಹಾಗೂ ಕಾರ್ ಸವಾರರು ತಮ್ಮ ವಾಹನಗಳನ್ನು ಚಲಾಯಿಸಲು ಪರದಾಡಬೇಕಾಯಿತು.