Breaking News

ಮಾಡಿದ್ದುಣ್ಣೋ ಮಹಾರಾಯ! ಮಗ ನುಡಿದ ಸಾಕ್ಷಿಯಿಂದಲೇ ತಂದೆಗೆ ನಾಲ್ಕು ವರ್ಷ ಜೈಲು ಶಿಕ್ಷೆ

Spread the love

ಬಳ್ಳಾರಿ: ಪತ್ನಿಗೆ ಬಲವಂತವಾಗಿ ವಿಷ ಕುಡಿಸಲು ಹೋದ ಪತಿರಾಯ ಇದೀಗ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾನೆ. ಗಮನಾರ್ಹವೆಂದರೆ, ಸ್ವಂತ ಮಗನ ಸಾಕ್ಷಿಯಿಂದಾಗಿಯೇ ತಂದೆ ಕಂಬಿ ಹಿಂದ ಕೊಳೆಯಬೇಕಾದ ದುಸ್ಥಿತಿ ಎದುರಾಗಿದೆ.

 

2017ರ ಮೇ 18ರಂದು ನಡೆದ ಘಟನೆಯ ವಿಚಾರಣೆ ನಡೆಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿದೆ. ತನ್ನ ತಾಯಿಗೆ, ತಂದೆ ವಿಷ ಕುಡಿಸುವುದನ್ನು ಮಗ ನೋಡಿದ್ದ. ಇದೇ ಪ್ರಕರಣದ ಪ್ರಮುಖ ಸಾಕ್ಷಿಯಾತ್ತಿ. ಮಗ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ 2ನೇ ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಆರೋಪಿತನಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದೆ.

ವಿವರಣೆಗೆ ಬರುವುದಾದರೆ, ಸುಜಾತಾ ಎಂಬುವರು ಬಳ್ಳಾರಿ ನಿವಾಸಿಯಾದ ಪೆದ್ದಣ್ಣ ಎಂಬಾತನನ್ನು ವಿವಾಹವಾಗಿದ್ದರು. ದಂಪತಿಗೆ ಸುರೇಂದ್ರ ಹೆಸರಿನ 11 ವರ್ಷದ ಮಗ ಮತ್ತು 9 ವರ್ಷದ ಸ್ಫೂರ್ತಿ ಎನ್ನುವ ಮಗಳಾಗಿದ್ದಾಳೆ‌. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಆದರೆ, ದಂಪತಿಗಳ ಮಧ್ಯೆ ವೈಷಮ್ಯ ಬೆಳೆದು ನಿತ್ಯದ ಜಗಳಕ್ಕೆ ಕಾರಣವಾಗಿತ್ತು. ಗಂಡನಿಂದ ಸಜಾತಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹೆಚ್ಚಾಯಿತು.

2017ರ ಮೇ 18ರಂದು ಸಂಜೆ 4 ಗಂಟೆಗೆ ಆರೋಪಿತನು ಬೇರೆ ಮಹಿಳೆಯೊಂದಿಗೆ ಮನೆಯಲ್ಲಿ ಇದ್ದಾಗ, ಅದನ್ನು ಸಜಾತಾ ನೋಡಿದಳು. ಬಳಿಕ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಾನು ಬದುಕಿರಬೇಕಾದರೆ ಇನ್ನೊಬ್ಬಳನ್ನು ಮದುವೆಯಾಗಲು ನಾನು ಬಿಡುವುದಿಲ್ಲ ಎಂದು ಸುಜಾತಾ ಹೇಳಿದ್ದಳು. ಇದರಿಂದ ಕೋಪಗೊಂಡ ಪೆದ್ದಣ್ಣ, ಹೆಂಡತಿಯ ಮೇಲೆ ಹಲ್ಲೆ ಮಾಡಿ, ಬಳಿಕ ಬಲವಂತಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದೆ. ಅದೇ ಸಮಯಕ್ಕೆ ಮಗ ಸುರೇಂದ್ರ ಮನೆಗೆ ಬಂದಾಗ, ಸುಜಾತಾಳನ್ನು ಆತ ಪರಾರಿಯಾಗಿದ್ದ.

ಇತ್ತ ಅಸ್ವಸ್ಥಗೊಂಡ ಸುಜಾತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ಪೆದ್ದಣ್ಣ ವಿರುದ್ಧ ಐಪಿಸಿ ಸೆಕ್ಷನ್ 504, 323, 498(ಎ) ಹಾಗೂ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಠಾಣೆಯ ಪೊಲಿಸರಿಂದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ‌ಯು ಸಲ್ಲಿಕೆಯಾಗಿತ್ತು. ನ್ಯಾಯಾಲಯವು ಘಟನೆಯ ಪ್ರತ್ಯಕ್ಷದರ್ಶಿಯಾದ ಮಗ ಸುರೇಂದ್ರ ಹಾಗೂ ದೂರುದಾರಳಾದ ಹೆಂಡತಿ ಸುಜಾತ‌ ಸೇರಿದಂತೆ 8 ಸಾಕ್ಷಿಗಳ ವಿಚಾರಣೆ ನಡೆಸಿತ್ತು.

ಎರಡು ಕಡೆ ವಾದ ಆಲಿಸಿದ ಬಳ್ಳಾರಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ ವಿಧಿಸಿ, ಮಹತ್ವದ ತೀರ್ಪು ನೀಡಿದ್ದಾರೆ. 


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ