Breaking News

ಜಡ್ಜ್​ಗಳ ವೇತನ 3 ಪಟ್ಟು ಏರಿಕೆ

Spread the love

ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ (ಎಸ್​ಎನ್​ಜೆಪಿ) ಶಿಫಾರಸುಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ. ಅದರ ಅನುಷ್ಠಾನದಿಂದ ದೇಶದ ಸುಮಾರು 25,000 ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರ ಮೂಲ ವೇತನ ಮೂರು ಪಟ್ಟು ಹೆಚ್ಚಲಿದೆ. ಎಸ್​ಎನ್​ಜೆಪಿ ಶಿಫಾರಿತ ವೇತನವನ್ನು 2016ರ ಜನವರಿ 1ರಿಂದಲೇ ಪೂರ್ವಾನ್ವಯಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಸೂಚಿಸಿದ್ದಾರೆ.

 

  • 2016 ಜನವರಿ 1ರಂದು ಕೇಂದ್ರ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾಗಿತ್ತು. ಆ ದಿನಾಂಕದಿಂದಲೇ ಎಸ್​ಎನ್​ಜೆಪಿ ಅನುಷ್ಠಾನಕ್ಕೆ ಸಿಜೆಐ ರಮಣ ಸಲಹೆ ನೀಡಿದ್ದರು.
  • ಎಸ್​ಎನ್​ಜೆಪಿ ಜಾರಿಯಾದರೆ ಮೂಲ ವೇತನದಲ್ಲಿ 2.81 ಪಟ್ಟು ಏರಿಕೆಯಾಗುತ್ತದೆ.
  • 24,485 – ಪ್ರಸ್ತುತ ದೇಶದಲ್ಲಿ ಮಂಜೂರಾಗಿರುವ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ.
  • ನೇಮಕವಾಗಿರುವುದು 19,292 ಜಡ್ಜ್​ಗಳು
  • ನಿವೃತ್ತ ಜಡ್ಜ್​ಗಳ ಪಿಂಚಣಿ ಲೆಕ್ಕಾಚಾರದ ವಿಚಾರ ಪ್ರಸ್ತಾಪಿಸಿದಾಗ, ಸಿಜೆಐ ರಮಣ ಅವರು ಹಾಲಿ ಸೇವೆಯಲ್ಲಿರುವ ನ್ಯಾಯಾಧೀಶರಿಗೆ ಗೌರವಯುತ ವೇತನ ದೊರೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು.
  • 30% ಏರಿಕೆ – ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಡ್ಜ್​ಗಳಿಗೆ ಈಗಾಗಲೇ ಮೂಲ ವೇತನದಲ್ಲಿ ಶೇಕಡ 30 ಹೆಚ್ಚಳ ಮಾಡಲಾಗಿದೆ.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 30% ಬಾಕಿ ವೇತನವನ್ನು ಮುಂದಿನ ಮೂರು ತಿಂಗಳು ಹಾಗೂ ಶೇಕಡ 30ನ್ನು ಅದರ ನಂತರದ ಮೂರು ತಿಂಗಳಲ್ಲಿ ಪಾವತಿಸಬೇಕು. ಉಳಿದಿದ್ದನ್ನು 2023 ಜೂನ್ 30ರೊಳಗೆ ಇತ್ಯರ್ಥಪಡಿಸಬೇಕು ಎಂದು ಸಿಜೆಐ ನೇತೃತ್ವದ ಪೀಠ ತಾಕೀತು ಮಾಡಿದೆ.

Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ