Breaking News

ಟ್ರೋಲಿಗರಿಗೆ ಆಹಾರವಾದ ವಿಜಯಾನಂದ ಕಾಶಪ್ಪನವರ 2ನೇ ಮದುವೆ: ಜನರಿಗೆ ಇಳಕಲ್ ಕ್ರಿಕೆಟ್ ಪಂದ್ಯಾವಳಿ ನೆನಪು

Spread the love

ಬಾಗಲಕೋಟೆ: ಜಿಲ್ಲೆಯ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ  2ರಡನೇ ಮದುವೆ ಪ್ರಕರಣವು ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.

ಈ ಹಿಂದೆ ಕ್ಷೇತ್ರದಲ್ಲಿ ಪೂಜಾಶ್ರೀ ಹೆಸರು ಯಾವಾಗೆಲ್ಲಾ ಪ್ರಸ್ತಾಪವಾಗಿತ್ತು ಎಂದು ಕ್ಷೇತ್ರದ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಕಳೆದ ಜುಲೈ 1ರಂದು ಇಳಕಲ್​ ಪಟ್ಟಣದಲ್ಲಿ ನಡೆದಿದ್ದ ಐಪಿಎಲ್ ಪ್ರಿಮಿಯರ್ ಲೀಗ್ ಉದ್ಘಾಟನೆ ವೇಳೆ ನಟಿ ಪೂಜಾಶ್ರೀ ಅವರ ಹೆಸರು ಮೈಕ್​ನಲ್ಲಿ ಪ್ರಕಟವಾಗಿತ್ತು ಎಂದು ಹೇಳಲಾಗಿದೆ.

ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಗೆಂದು ಇಳಕಲ್​ಗೆ ಹಲವು ಕಿರುತೆರೆ ಹಾಗೂ ಹಾಗೂ ಹಿರಿತೆರೆ ಕಲಾವಿದರನ್ನು ಕರೆಸಲಾಗಿತ್ತು. ಈ ವೇಳೆ ಕಲಾವಿದರ ಹೆಸರು ಹೇಳುವಾಗ ಪೂಜಾಶ್ರಿ ಹೆಸರನ್ನು ಸಹ ಘೋಷಿಸಲಾಗಿತ್ತು. ಇತರ ಕಲಾವಿದರು ಎದ್ದು ನಿಂತು ಕೈ ಬೀಸಿ, ಕೈ‌ ಮುಗಿದಿದ್ದರು. ಆದರೆ ಪೂಜಾಶ್ರಿ ಹೆಸರು ಘೋಷಣೆಯಾದರೂ ಆಕೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ಕಲಾವಿದರ ಪಟ್ಟಿಯಲ್ಲಿ ಪೂಜಾಶ್ರಿ ಹೆಸರು ಇತ್ತಾದರೂ, ಆಮಂತ್ರಣ ಪತ್ರಿಕೆಯಲ್ಲಿ ವಿಜಯಾನಂದ ಕಾಶಪ್ಪನವರ ಅವರ ಧರ್ಮಪತ್ನಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವೀಣಾ ಅವರ ಹೆಸರು ಕಾಣಿಸಿರಲಿಲ್ಲ.

 ವೈರಲ್ ಆಗಿರುವ ಮೆಸೇಜ್

ಬಿಜೆಪಿಯಿಂದ ಟ್ರೋಲ್​

ಹುನಗುಂದ ಶಾಸಕ ದೊಡ್ಡನಗೌಡ ಪಾಟಿಲ್ ಅಭಿಮಾನಿ ಬಳಗ ಗ್ರೂಪ್​ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ ಆಗಿದ್ದನ್ನು ಪ್ರಸ್ತಾಪಿಸಿ ಟ್ರೋಲ್ ಮಾಡಿದ್ದಾರೆ. ಸಾಹೇಬರು ಎಲ್ಲದಕ್ಕೂ ಮಾಧ್ಯಮದವರಿಗೆ ದಾಖಲೆ ಕೇಳುತ್ತಾರೆ. ಇನ್ನು ಸ್ವಲ್ಪ ದಿನ ಕಾಯಿರಿ. ನಿಮ್ಮ ಎರಡನೇ ಹೆಂಡತಿಯ ಹೆಣ್ಣು ಮಗು ದಾಖಲೆ ತಗೊಂಡು ಬರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

‘ನೀವು ಮಾಡೋದೆಲ್ಲ ಇಂಥ ಕೆಲಸ. ಮತ್ತೆ ನಮ್ಮ ಕರ್ನಾಟಕದ ‌ಬಿಜೆಪಿ ಕಿಗ್ ಯಡ್ಡಿ ಅಪ್ಪಾಜಿಗೆ ಚಾಲೆಂಜ್ ಹಾಕ್ತಿಯಾ. ಹಾಕು ಹಾಕು ನೀ ಚಾಲೆಂಜ್ ಹಾಕಿದಾಗ ನಮ್ಮ ಡಿಜಿಪಿ (ದೊಡ್ಡನಗೌಡ ಪಾಟಿಲ್) ಗೆದ್ದಿದ್ದಾರೆ. ಇನ್ನೊಮ್ಮೆ ಚಾಲೆಂಜ್ ಹಾಕು ನಮ್ಮ ರಾಮುಲು ಜಿ ನೂ ಗೆಲ್ತಾರೆ. ನಿನ್ ಚಾಲೇಂಜ್ ನಮ್ಮ ಗೆಲುವಿನ ಮುನ್ಸೂಚನೆ’ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶಗಳನ್ನು ಹರಿಬಿಡಲಾಗಿದೆ.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ