ಬಳ್ಳಾರಿ, ವಿಜಯನಗರ: ಇಲ್ಲಿಯವರೆಗೆ ಬಿ.ಎಸ್ ಯಡಿಯೂರಪ್ಪ ಅವರನ್ನು ಬಳಸಿಕೊಂಡ ಬಿಜೆಪಿ ಈಗ ಅವರನ್ನು ಹೊರ ಹಾಕಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಪರ ಮಾತನಾಡುತ್ತಲೇ ಬಿಜೆಪಿಯನ್ನು ತೆಗಳಿದ್ದಾರೆ.
ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಎಂಬುದು ಸರಿಯಲ್ಲ. ಅವರ ಕೆಲಸ ಗಮಮಿಸಬೇಕು. ಬಿಎಸ್ವೈ ಅವರನ್ನು ಸೈಡ್ ಲೈನ್ ಮಾಡುತ್ತಿರೋದನ್ನು ಇಡೀ ಕರ್ನಾಟಕದ ಜನರು ನೋಡುತ್ತಿದ್ದಾರೆ. ರಾಜಕಾರಣದಲ್ಲಿ ವಯಸ್ಸು ಮುಖ್ಯ ಅಲ್ಲ. ಅವರು ಈಗಲೂ ಮತ ತರುವಂತಹ ಶಕ್ತಿ ಹೊಂದಿದ್ದಾರೆ. ಪುತ್ರ ವಿಜಯೇಂದ್ರ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಆದರೆ ಅವರ ಪಕ್ಷವು ವಿಜಯೇಂದ್ರ ಅವರಿಗೆ ಟಿಕೆಟ್ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ವಿಜಯೇಂದ್ರ ನನಗೆ ಒಳ್ಳೆಯ ಸ್ನೇಹಿತ, ಅವರಿಗೆ ಒಳ್ಳೆಯದಾಗಲಿ ಎಂದು ಸಂತೋಷ್ ಲಾಡ್ ಹೇಳಿದರು.