ಬೈಲಹೊಂಗಲ ಪುರಸಭೆಯ ವ್ಯಾಪ್ತಿಯ 27 ವಾರ್ಡ್‍ಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಒತ್ತಾಯಿಸಿ ಬೈಲಹೊಂಗಲ ಪಟ್ಟಣದಲ್ಲಿ ಇಂದು ಧಾರವಾಡ ಬೈಪಾಸ್ ರಸ್ತೆ ತಡೆದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷರಾದ ಶಂಕರ ಮಾಡಲಗಿ ನೇತೃತ್ವದಲ್ಲಿ ರಸ್ತೆ ತಡೆದು ಆಕ್ರೋಶ ಹೊರಹಾಕಲಾಯಿತು.
ಬೈಲಹೊಂಗಲ ಪುರಸಭೆಯ 27 ವಾರ್ಡ್ ಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಒತ್ತಾಯಿಸಿ ಬೈಲಹೊಂಗಲ ಪಟ್ಟಣದಲ್ಲಿ ಇಂದು ಸೋಮವಾರ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಧಾರವಾಡ ಬೈಪಾಸ್ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರ ಹಾಕಲಾಯ
ಈಟಿ ಬಸವೇಶ್ವರ ಮುಖ್ಯರಸ್ತೆ ಪಕ್ಕದ ಧಾರವಾಡ, ಸವದತ್ತಿ ರಸ್ತೆಗೆ ಅಡ್ಡ ಕುಳಿತು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಈ ವೇಳೆ ರಸ್ತೆ ಬಂದ್ ಮಾಡಿದ್ದರಿಂದ ಸವದತ್ತಿ, ಧಾರವಾಡ ಬಸ್‍ಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು. ಪ್ರತಿಭಟನಾ ನಿರತರು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಶಾಲೆ, ಕಾಲೇಜು, ಕೆಲಸಕ್ಕೆ ಹೋಗುತ್ತಿರುವವರು ಬಸ್‍ನಿಂದ ಕೆಳಗಿಳಿದು ಹೋಗಿದ್ದಾರೆ.