ಬೆಳಗಾವಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ಹಿಡಕಲ್ ಡ್ಯಾಂ,ಮತ್ತು ನ ಗೊಡಚಿನಮಲ್ಕಿ ಜಲಪಾತಗಳ ದರ್ಶನ ಮಾಡಲು ಬೆಳಗಾವಿ ಸಾರಿಗೆ ಸಂಸ್ಥೆ ಅತ್ಯಂತ ಕಡಿಮೆ ದರದಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷವಾದ ಬಸ್ ಸೌಲಭ್ಯ ಕಲ್ಪಿಸಿದೆ.
ಕೇವಲ 200 ರೂ ದರದಲ್ಲಿ ಹಿಡಕಲ್ ಡ್ಯಾಂ, ಗೋಕಾಕ್ ಫಾಲ್ಸ್ ದರ್ಶನ ಮಾಡಿಸಲು, ಬೆಳಗಾವಿ ಬಸ್ ನಿಲ್ದಾಣದಿಂದ ಬೆಳಗ್ಗೆ 9:00 ಗಂಟೆಗೆ ಬಸ್ ಬಿಡಲಿದೆ.ಈ ಬಸ್ ಜಿಲ್ಲೆಯ ಮೂರು ಪ್ರವಾಸಿ ತಾಣಗಳ ದರ್ಶನ ಮಾಡಿಸಿ ಈ ವಿಶೇಷ ಬಸ್ ಸಂಜೆ ಆರು ಘಂಟೆಗೆ ಮತ್ತೆ ಬೆಳಗಾವಿ ನಗರಕ್ಕೆ ತಲುಪಲಿದೆ. ಈ ಬಸ್ ಸೌಲಭ್ಯ ಪ್ರತಿ ಎರಡನೇಯ ಶನಿವಾರ ಭಾನುವಾರ ಮತ್ತು ನಾಲ್ಕನೇಯ ಶನಿವಾರ ಭಾನುವಾರ,ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಮಾತ್ರ ಈ ಬಸ್ ಸೌಲಭ್ಯ
ಇರುತ್ತದೆ
Laxmi News 24×7