ಮಕ್ಕಳು ತಮ್ಮ ಜೀವನದ ಆರಂಭದಲ್ಲಿ ಯಾವ ಆಹಾರ ಪದ್ಧತಿ ಅನುಸರಿಸುತ್ತಾರೋ ಅದು ಜೀವನದುದ್ದಕ್ಕೂ ಪರಿಣಾಮ ಬೀರುತ್ತದೆ .
ಹಾಗಿದ್ದರೆ ನೀವು ನಿಮ್ಮ ಮಕ್ಕಳಿಗೆ ಸರಿಯಾದ ಆಹಾರ ಕ್ರಮ ಅನುಸರಿಸುತ್ತಿದ್ದೀರಾ..?
ಮಕ್ಕಳಲ್ಲಿ ಎನರ್ಜಿ ಹೆಚ್ಚಿಸಲು ಅವರಲ್ಲಿ ರಕ್ತದ ಉತ್ಪಾದನೆ ಹೆಚ್ಚಿಸಲು ಈ ಜ್ಯೂಸ್ ಗಳನ್ನು ನೀಡಿ.
-1 ಗ್ಲಾಸ್ ನೀರಿಗೆ 1 ಹಿಡಿ ಒಣದ್ರಾಕ್ಷಿ ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಅದಕ್ಕೆ ಕೆಲವು ಹನಿ ನಿಂಬೆರಸ ಮಿಕ್ಸ್ ಮಾಡಿ ಮಕ್ಕಳಿಗೆ ನೀಡಿದರೆ ಅವರು ದಿನವಿಡೀ ಚುರುಕಾಗಿರುತ್ತಾರೆ. ಅವರ ರಕ್ತ ವೃದ್ಧಿಯಾಗುತ್ತದೆ. ಯಾವುದೇ ಸುಸ್ತು, ಆಯಾಸದ ಸಮಸ್ಯೆ ಕಾಡಲ್ಲ.
-1 ಗ್ಲಾಸ್ ಹಾಲಿಗೆ 5-10 ಹಸಿ ಖರ್ಜೂರವನ್ನು ಪೀಸ್ ಮಾಡಿ ಹಾಕಿ ಚೆನ್ನಾಗಿ 5 ನಿಮಿಷ ಕುದಿಸಿ. ಬಳಿಕ ಅದನ್ನು ಸೋಸಿ ಮಕ್ಕಳಿಗೆ ಕುಡಿಯಲು ನೀಡಿದರೆ ಮಕ್ಕಳ ಎನರ್ಜಿ ಹೆಚ್ಚಾಗುತ್ತದೆ.
–ದಾಳಿಂಬೆ ರಸ 1 ಗ್ಲಾಸ್ ತೆಗೆದುಕೊಂಡು ಅದಕ್ಕೆ 1 ಚಮಚ ಬಿಳಿ ಅಥವಾ ಕಪ್ಪು ಎಳ್ಳನ್ನು ಪುಡಿ ಮಾಡಿ ಹಾಕಿ ಮಿಕ್ಸ್ ಮಾಡಿ ಮಕ್ಕಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಸಿರಿ. ಇದರಿಂದ ಮಕ್ಕಳಲ್ಲಿ ರಕ್ತ ವೃದ್ಧಿಯಾಗುತ್ತದೆ.
The post ಮಕ್ಕಳ ಎನರ್ಜಿ ಹೆಚ್ಚಿಸಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಸಿ.!