ಬೆಳಗಾವಿಯಲ್ಲಿ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಭಾರೀ ಟ್ರಕ್‍ನ ಚಕ್ರಗಳು ರಸ್ತೆ ಕುಸಿತದಲ್ಲಿ ಸಿಲುಕಿಹಾಕಿಕೊಂಡಿತ್ತು.
ಹೌದು ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿಯ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಟ್ರಕ್‍ನ ಚಕ್ರಗಳು ಸಿಲುಕಿಹಾಕಿಕೊಂಡಿವೆ. ಭಾರೀ ಲೋಡ್‍ನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ನ ಹಿಂದಿನ ಚಕ್ರಗಳು ರಸ್ತೆ ಕುಸಿದು ಸಿಲುಕಿಹಾಕಿಕೊಂಡಿತ್ತು
ಈ ವೇಳೆ ಸ್ಥಳದಲ್ಲಿ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು. ಇನ್ನು ವಾಹನದಿಂದ ವಸ್ತುಗಳನ್ನು ಬೇರೆ ವಾಹನಕ್ಕೆ ಲೋಡ್ ಮಾಡಿ ವಾಹನವನ್ನು ತೆರವುಗೊಳಿಸುವ ಕಾರ್ಯದಲ್ಲಿ ವಾಹನ ಚಲಕರು ಹಾಗೂ ಮಾಲೀಕರು ಮುಂದಾಗಿದ್ದರು.