Breaking News

ನಾನು ಯಾವತ್ತು ಯಾವುದರ ಹಿಂದೆಯೂ ಹೋದವನಲ್ಲ: ಡಾ.ಡಿ. ವೀರೇಂದ್ರ ಹೆಗ್ಗಡೆ

Spread the love

ಮಂಗಳೂರು: ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿದೇರ್ಶನ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ನಮ್ಮ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಬಹುಶಃ ಇದು ವಿಸ್ತಾರವಾಗಿ ಇಡೀ ದೇಶಕ್ಕೆ ತಲುಪುವ ಸಾಧ್ಯತೆ ಇದೆ ಎಂದರು.

ಕಸ್ಟಮರ್ಸ್ ಸರ್ವಿಸ್ ಸೆಂಟರ್ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಏಜೆನ್ಸಿ ಇದೆ. ಈಗಾಗಲೇ ನಾವು 6 ಸಾವಿರ ಸೆಂಟರ್ ಮಾಡಿದ್ದೇವೆ. ಸರ್ಕಾರದ ಯೋಜನೆಯಲ್ಲಿ 600 ಕಾರ್ಯಕ್ರಮ ಇದೆ. ಅದು ಈ ಜನತೆಗೆ ಗೊತ್ತೇ ಇಲ್ಲ ಎಂದರು.

ರಾಸ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ ಎಂಬ ಯಾವುದೇ ಸುಳಿವು ನನಗೆ ಇರಲಿಲ್ಲ. ಪ್ರಧಾನಿಯವರು ಘೋಷಣೆ ಮಾಡುವ ಮೊದಲು ಒಬ್ಬರು ಕರೆ ಮಾಡಿ ನಿಮಗೆ ಈ ತರ ಒಂದು ಮೆಸೇಜ್ ಬರಬಹುದು ಅಂತ ಹೇಳಿದ್ರು. ಯಾವತ್ತೂ ನಾನು ಯಾವುದರ ಹಿಂದೆ ಹೋದವನಲ್ಲ. ಬಂದಾಗೆಲ್ಲ ನಮ್ಮ ಕಾರ್ಯಕರ್ತರ ಸಂತಸ ಇಮ್ಮಡಿಯಾಗುತ್ತಿದೆ ಎಂದರು.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ