ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಬಿಸಿಯೂಟ ಸೇವಿಸುವ ಮೂಲಕ ಬೆಳಗಾವಿಯ ದಕ್ಷಿಣ ಶಾಸಕ ಅಭಯ್ ಪಾಟೀಲ್ ತಮ್ಮ ಸರಳತೆ ಮೆರೆದಿದ್ದಾರೆ.
ಹೌದು ಶಾಹಪುರದ ಅಳವಾನ್ ಗಲ್ಲಿಯ ಸರ್ಕಾರಿ ಶಾಲೆಗೆ ಇಂದು ದಿಢೀರ್ ಅಂತಾ ಭೇಟಿ ನೀಡಿದ ಶಾಸಕ ಅಭಯ್ ಪಾಟೀಲ್ ಮಧ್ಯಾಹ್ನದ ಬಿಸಿಯೂಟವನ್ನು ಪರೀಕ್ಷಿಸಿದರು.
ಇದೇ ವೇಳೆ ಮಕ್ಕಳ ಜೊತೆಗೆ ಕುಳಿತುಕೊಂಡು ಬಿಸಿಯೂಟ ಸವಿದ ಅಭಯ್ ಪಾಟೀಲ್, ಗುಣಮಟ್ಟದ ಬೇಳೆ ಮತ್ತು ಅಕ್ಕಿಯನ್ನು ಊಟದಲ್ಲಿ ಯಾಕೆ ಬಳಸುತ್ತಿಲ್ಲ ಎಂದು ಬಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳಪೆ ಮಟ್ಟದ ಆಹಾರ ಪೂರೈಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.