ಶಿವಮೊಗ್ಗ: ಸರ್ಕಾರಿ (KSRTC) ಮತ್ತು ಖಾಸಗಿ ಬಸ್ ( Privet Bus ) ನಡುವೆ ಅಪಘಾತ ( Accident ) ಸಂಭವಿಸಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ( Injured ) ಘಟನೆ ಶಿವಮೊಗ್ಗ ( Shivamogga ) ತಾಲೂಕಿನ ತೋಟದಕೆರೆ ಬಳಿ ನಡೆದಿದೆ.
ಗಾಯಾಳುಗಳನ್ನು ಮೆಗ್ಗಾನ್ (Meggan Hospital) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಖಾಸಗಿ ಬಸ್ ಚಾಲಕ ಶ್ರೀಧರ್ ಸ್ಥಿತಿ ಗಂಭೀರವಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಖಾಸಗಿ ಬಸ್ ಕೆಕೆಬಿ ಶಿವಮೊಗ್ಗದಿಂದ ಶೃಂಗೇರಿ ಹೊರಟಿತ್ತು. ಸರಕಾರಿ ಬಸ್ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ನಲ್ಲಿ 35ಕ್ಕೂ ಹೆ್ಚ್ಚು ಮತ್ತು ಕೆಎಸ್ ಆರ್ ಟಿಸಿ ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
Laxmi News 24×7