Breaking News

ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಭಾವಚಿತ್ರದ ಕ್ಯಾಲೆಂಡರ್

Spread the love

ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ 8ವರ್ಷ ಪೂರೈಸುದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರದ ಕ್ಯಾಲೆಂಡರ್ ಕಂಡು ಬಿಜೆಪಿ ನಾಯಕರು ಧಂಗಾಗಿದ್ದಾರೆ.

ಮಾಧ್ಯಮಗಳು ಅದನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಲೇ ಬಿಜೆಪಿ ಕಾರ್ಯಕರ್ತರು ಕ್ಯಾಲೆಂಡರ್‍ನ್ನು ತೆರವು ಮಾಡಿದ್ದಾರೆ.

ಕೇಂದ್ರ ಸರಕಾರಕ್ಕೆ ಈಗ 8ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಖಾತೆಯ ಸಚಿವ ಸೋಮಪ್ರಸಾದ್‍ರವರನ್ನು ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಗೋವಿಂದ್ ಕಾರಜೋಳ್ ಸಂಸದೆ ಮಂಗಳಾ ಅಂಗಡಿ ಒಳಗೊಂಡಂತೆ ಅನೇಕ ಬಿಜೆಪಿ ನಾಯಕರು ಇಂದು ದಲಿತರ ಮನೆಯಲ್ಲಿ ಊಟ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹಿಂಡಲಗಾದ ಬಾಯವ್ವಾ ಮಾಸ್ತೆ ಎಂಬ ವೃದ್ಧೆಯ ಮನೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಬಾಯವ್ವಾ ಮನೆಯಲ್ಲಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಭಾವಚಿತ್ರದ ಕ್ಯಾಲೆಂಡರ್ ಗೋಡೆಯ ಮೇಲೆ ನೇತಾಡುತ್ತಿತ್ತು. ಇದನ್ನು ಕಂಡು ಬಿಜೆಪಿ ಕಾರ್ಯಕರ್ತರು ಧಂಗಾಗಿದ್ದಾರೆ.

ಕ್ಯಾಲೆಂಡರ್‍ಕಾಣುತ್ತಿದ್ದಂತೆ ಮಾಧ್ಯಮಗಳು ಅದನ್ನು ಚಿತ್ರೀಕರಣ ಮಾಡಲು ಪ್ರಾರಂಭಿಸಿದವು. ತಕ್ಷಣವೇ ಎಚ್ಚೆತ್ತುಕೊಂಡ ಬಿಜೆಪಿ ಕಾರ್ಯಕರ್ತರು ಕ್ಯಾಲೆಂಡರ್‍ನ್ನು ತೆಗೆದುಕಾಕಿದ್ರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ