ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ (PM Modi) ಬಂದಾಗ ಜನ ಸೇರಿಸಿದ್ರೆ ಕೋವಿಡ್ (Covid) ಹೆಚ್ಚಾಗಲ್ವಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಿಡಿಮಿಡಿಗೊಂಡರು. ಉತ್ತರಿಸದೇ ಹೊರಟು ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಕೋವಿಡ್ ಹೆಚ್ಚಾಗುತ್ತೆ. ಪ್ರಧಾನಿ ಮೋದಿ ಬಂದಾಗ ಜನ ಸೇರಿದರೆ ಕೋವಿಡ್ ಹೆಚ್ಚಾಗಲ್ವಾ ಎಂದು ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಸಿಎಂ ಉತ್ತರಿಸದೇ ಹೊರಟು ಹೋದರು.