ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಳಗಾವಿಯ ಆರ್‍ಎಲ್‍ಎಸ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ದಿಶಾ ಯಾದವ 600ಕ್ಕೆ 591 ಅಂಕ ಗಳಿಸುವ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಹೌದು ಶನಿವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯತ ಏಜುಕೇಶನ್ ಸೊಸೈಟಿಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಅಮೋಫ ಸಾಧನೆ ಮಾಡಿದ್ದಾರೆ. ಕಾಲೇಜಿನ ಫಲಿತಾಂಶ ಶೇ.92ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 604 ವಿದ್ಯಾರ್ಥಿಗಳ ಪೈಕಿ 186 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಪಾಸ್ ಆಗಿದ್ದರೆ, 327 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.
ದಿಶಾ ಯಾದವ ಪಿಸಿಎಂಬಿಯಲ್ಲಿ ಶೇ.100ರಷ್ಟು ಅಂಕ ಪಡೆದುಕೊಂಡಿದ್ದು, ಇಂಗ್ಲಿಷ-93, ಹಿಂದಿ-98 ಅಂಕ ಪಡೆದುಕೊಳ್ಳುವ ಮೂಲಕ ಒಟ್ಟು 600ಕ್ಕೆ 591 ಅಂಕ ಗಳಿಸಿ ಶೇ.98.5ರಷ್ಟು ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಬಂದಿದ್ದರೆ, ಸಾಕ್ಷಿ ಪಟ್ಟಣಶೆಟ್ಟಿ ಹಾಗೂ ಸೌಮ್ಯಶ್ರೀ ಇನಾಮ್‍ದಾರ್ 587 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ, ಅಭಯ ರೇವಣಕರ್ ಮತ್ತು ಸುಮಾ ಮುಂಗರವಾಡಿ 585 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.