Breaking News

ರೋಹಿತ್ ಚಕ್ರತೀರ್ಥರ ಪ್ರತಿಕೃತಿಗೆ ಸೀರೆ ಉಡಿಸಿ ದಹಿಸಲು ಮುಂದಾದ ಕರವೆ ಕಾರ್ಯಕರ್ತರು..!!

Spread the love

ಶಾಲಾ ಪಠ್ಯ ಪುಸ್ತದಲ್ಲಿ ನಮ್ಮ ನಾಡಿನ ಮಹಾತ್ಮರನ್ನು ಅವಮಾನ ಮಾಡಿದ್ದಾರೆಂದು ಆರೋಪಿಸಿ ಬೆಳಗಾವಿಯಲ್ಲಿ ಕರವೆ ಶಿವರಾಮೇಗೌಡ ಬಣದಿಂದ ರೋಹಿತ್ ಚಕ್ರತೀರ್ಥರವರ ಪ್ರತಿಕೃತಿ ದಹಿಸುವ ವೇಳೆ ಪೊಲೀಸರು ಪ್ರತಿಕೃತಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಲಾ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕುವೆಂಪು ಮೊದಲಾದ ನಾಡಿನ ಗಣ್ಯರನ್ನು ಅವಮಾನ ಮಾಡಿದ್ದಾರೆ. ಇಂಥವರನ್ನು ಪಠ್ಯಪುಸ್ತಕ ಸಮೀತಿಯಿಂದ ವಜಾ ಮಾಡಬೇಕೆಂದು ಅನೇಕ ಹೋರಾಟಗಳನ್ನು ಮಾಡಿದರೂ ಕೂಡ ಸರಕಾರ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸರಕಾರ ಒಳಗೊಳಗೇ ಇದಕ್ಕೆ ಸಹಕಾರ ನೀಡುತ್ತಿದೆ ಎಂದು ಆರೋಪಿಸಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕರವೆ ಶಿವರಾಮೇಗೌಡ ಬಣದ ಕಾರ್ಯಕರ್ತರು ರೋಹಿತ್ ಚಕ್ರತೀರ್ಥರವರ ಪ್ರತಿಕೃತಿಗೆ ಸೀರೆಯನ್ನು ಉಡಿಸಿ ದಹಿಸಲು ಮುಂದಾಗಿದ್ದರು.

ಈ ವೇಳೆ ಅದನ್ನು ತಡೆಯಲು ಮುಂದಾದ ಪೊಲೀಸರು ಹಾಗೂ ಕರವೆ ಕಾಯ್ಕರ್ತರ ನಡುವೆ ಹೈ ಡ್ರಾಮಾ ನಡೆದಿದೆ. ಈ ವೇಳೆ ಪ್ರತಿಕೃತಿ ದಹಿಸಲು ಮುಂದಾದ ಕರವೆ ಕಾರ್ಯಕರ್ತರನ್ನು ನಡೆದು ಪ್ರತಿಕೃತಿಯನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಮಾರ್ಕೆಟ್ ಪೊಲೀಸರು ಹಾಗೂ ಕರವೆ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.


Spread the love

About Laxminews 24x7

Check Also

ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ

Spread the love ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ ರಾಜ್ಯದಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ