ಬೆಂಗಳೂರು: ರಾಹುಲ್ ಗಾಂಧಿ ಅತ್ಯಾಚಾರ ಮಾಡ್ತಿದ್ದಾರೆ ಎಂದು ಕರ್ನಾಟಕ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗಂಭೀರ ಆರೋಪ ಮಾಡಿದ್ದಾರೆ.
ಇ.ಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿ ಕಾಂಗ್ರೆಸ್ ನಾಯಕರು ಬೃಹತ್ ಜಾಥಾವನ್ನು ನಗರದಲ್ಲಿ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ ನಲಪಾಡ್, ರಾಹುಲ್ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ. ಅತ್ಯಾಚಾರ ಎಂದರೇ ರೇಪ್ ಅಲ್ಲ ದೌರ್ಜನ್ಯ. ನಮ್ಮ ಮಾಜಿ ಅಧ್ಯಕ್ಷರ ಮೇಲೆ ದೌರ್ಜನ್ಯ ಮಾಡುತ್ತಿರೋ ಖಂಡನೀಯ.
ನಮ್ಮ ಮಾಜಿ ಅಧ್ಯಕ್ಷ ಮೇಲೆ ದೌರ್ಜನ್ಯ ಮಾಡಿದರೇ ದೇವರು ಒಳ್ಳೆದು ಮಾಡೋದಿಲ್ಲ. ಇದನ್ನು ಇಡೀ ದೇಶದ ಜನರು ನೋಡ್ತಿದ್ದಾರೆ.. ಇ.ಡಿ-ಐ.ಟಿ ಏಜೆನ್ಸಿಗಳನ್ನು ಇಟ್ಟುಕೊಂಡು ಏನ್ ಆಟವಾಡುತ್ತಿದ್ದಾರೆ ಅನ್ನೋದನ್ನು ದೇವರು ಕೂಡ ನೋಡ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಜನರೇ 2023 ಮತ್ತು 2024ರ ಚುನಾವಣೆಯಲ್ಲಿ ನೀಡುತ್ತಾರೆ. ಪೊಲಿಟಿಕಲ್ ಅಜೆಂಡಾ ಇಟ್ಟುಕೊಂಡು ಈ ರೀತಿ ಮಾಡ್ತಿದ್ದಾರೆ ಎಂದು ನಲಪಾಡ್ ಆರೋಪಿದರು.
Laxmi News 24×7