Breaking News

ಪೊಲೀಸ ಠಾಣೆ ಮೆಟ್ಟಿಲೇರಿದ ಪದ್ಮಾವತಿ

Spread the love

ಚಂದನವನದ ರಾಣಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ತೀರಾ ರಾಜಕೀಯವಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳದೇ ಇದ್ದರೂ, ಸಿನಿಮಾಗಳ ಕಾರ್ಯಕ್ರಮಗಳು, ಟ್ರೈಲರ್, ಟೀಸರ್ ಹೀಗೆ ಒಂದಿಲ್ಲೊಂದು ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ.

ಹೆಚ್ಚೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಭಿಮಾನಿಗಳಿಗೆ ಹೊಸ ಹೊಸ ವಿಷಯಗಳನ್ನು ಕೊಡುವ ರಮ್ಯಾ ಅವರಿಗೆ ಕಿಡಿಗೇಡಿಯೊಬ್ಬ ಇನ್ಸ್ಟಾದಲ್ಲಿ ನಿಂದನೆ ಮಾಡಿದ್ದಾನಂತೆ. ಹಾಗಾಗಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರಂತೆ. ತಮಗೆ ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದು, ಅವನ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. 


Spread the love

About Laxminews 24x7

Check Also

ಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿ ನಿ ನೇಣು ಬಿಗಿದುಕೊಂಡ ಘಟನೆ ನಡೆದಿದೆ.

Spread the loveಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿಯೋರ್ವವಳು ಆತ್ಮಹ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸವದತ್ತಿ ಮೂಲದ ಪವಿತ್ರಾ ಎಂಬ ವಿಧ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ