Breaking News
Home / ರಾಜಕೀಯ / ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ರೋಚಕ ಘಟ್ಟ

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ರೋಚಕ ಘಟ್ಟ

Spread the love

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ರೋಚಕ ಘಟ್ಟತಲುಪಿದ್ದು, ಕಾಂಗ್ರೆಸ್‌, ಜೆಡಿಎಸ್‌ ನಡುವೆ “ಅಭ್ಯರ್ಥಿ ವಾಪಸಾತಿ ಅಥವಾ ನಿವೃತ್ತಿ’ ಸಮರ ಬಿರುಸಾಗಿದೆ.

ಒಟ್ಟು ನಾಲ್ವರು ಸದಸ್ಯರನ್ನು ಆರಿಸುವ ಸಲುವಾಗಿ ಸೋಮವಾರ ಚುನಾವಣೆ ನಡೆಯಲಿದ್ದು, 6 ಮಂದಿ ಕಣದಲ್ಲಿದ್ದಾರೆ.

 

ಒಟ್ಟು ನಾಲ್ವರು ಸದಸ್ಯರನ್ನು ಆರಿಸುವ ಸಲುವಾಗಿ ಸೋಮವಾರ ಚುನಾವಣೆ ನಡೆಯಲಿದ್ದು, 6 ಮಂದಿ ಕಣದಲ್ಲಿದ್ದಾರೆ. ಬಿಜೆಪಿಮೂವರನ್ನು ಕಣಕ್ಕಿಳಿಸಿದ್ದು, ಪಟ್ಟು ಸಡಿಲಿಸದೆ ಚುನಾವಣೆಗೆ ಸಿದ್ಧವಾಗಿದೆ. ಕಾಂಗ್ರೆಸ್‌,

ಜೆಡಿಎಸ್‌ ಮಾತ್ರ ಹಿಂದಿನ ಚುನಾವಣೆಗಳಸಹಕಾರ ಮತ್ತು ಜಾತ್ಯತೀತ ಅಂಶಗಳನ್ನು ಪ್ರಸ್ತಾವಿಸಿ ಅಭ್ಯರ್ಥಿಯ ನಿವೃತ್ತಿಯ ಬಗ್ಗೆ ಪರಸ್ಪರ ಆಗ್ರಹದಲ್ಲಿ ತೊಡಗಿವೆ.

ಜೆಡಿಎಸ್‌ ನಡೆ ಏನು?
ಕಣದಿಂದ ನಾವು ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂಬುದು ಎಚ್‌.ಡಿ. ಕುಮಾರಸ್ವಾಮಿ ಅವರ ಪಟ್ಟು. ಬಿಜೆಪಿಯನ್ನು ಸೋಲಿಸಲು ಎಲ್ಲದಕ್ಕೂ ಸಿದ್ಧನಿದ್ದೇನೆ. ಕಾಂಗ್ರೆಸ್‌ ನಾಯಕರಿಗೆ ಇದಕ್ಕಿಂತ ಮುಕ್ತ ಕೊಡುಗೆ ಏನು ಕೊಡಲಿ? ಗುರುವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟತೆ ಸಿಗಲಿದೆ. ಕುಪೇಂದ್ರ ರೆಡ್ಡಿ ಅವರು ಎಲ್ಲ ಶಾಸಕರನ್ನು ಭೇಟಿ ಮಾಡಿದ್ದಾರೆ. 32 ಶಾಸಕರು ಒಟ್ಟಾಗಿ ಮತ ನೀಡುತ್ತಾರೆ ಎಂದು ತಿಳಿಸಿದರು.

ನಾವು ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ನಮ್ಮ ಜತೆ ಸಮಾಲೋಚಿಸಿ ಅಭ್ಯರ್ಥಿ ಹಾಕಿದ್ದಾರಾ? ಬೆಂಬಲ ಕೊಡಿ ಎಂದು ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಿತ್ತಲ್ಲವೇ? ನಾನೇ ಸುಜೇìವಾಲಾ ಜತೆ ಮಾತನಾಡಿ ಅಭಿಪ್ರಾಯವನ್ನು ಅವರಿಗೆ ತಿಳಿಸಿದ್ದೇನೆ ಎಂದೂ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್‌ ಹೇಳುವುದೇನು?
ಎಚ್‌ಡಿಕೆ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ತಿರುಗೇಟು ನೀಡಿದ್ದಾರೆ. ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗಳಿದ್ದರೂ ಸಾಕಷ್ಟು ಬಾರಿ ಜೆಡಿಎಸ್‌ ಬೆಂಬಲಕ್ಕೆ ನಿಂತಿದ್ದೇವೆ. ಜಾತ್ಯತೀತ ತತ್ವವನ್ನು ಉಳಿಸಿಕೊಳ್ಳಲು ಈ ಬಾರಿ ನಮಗೆ ಬೆಂಬಲ ನೀಡಬೇಕು ಎಂದಿದ್ದಾರೆ.

ಬಿಜೆಪಿ ನಡೆಯೇನು?
ಈ ನಡುವೆ ಬಿಜೆಪಿಯು ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ. ಶಾಸಕರನ್ನು ಮೂರು ತಂಡಗಳಾಗಿಸಿ ಮೂವರಿಗೂ ಗೆಲುವಿನ ಮತ ಹಾಕಿಸುವಂತೆ ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಸಭಾ ಚುನಾವಣ ಉಸ್ತುವಾರಿ ಕಿಶನ್‌ ರೆಡ್ಡಿ, ಸಚಿವರು, ಶಾಸಕರು, ಅಭ್ಯರ್ಥಿಗಳಾದ ಜಗ್ಗೇಶ್‌ ಮತ್ತು ಲೆಹರ್‌ ಸಿಂಗ್‌ ಹಾಜರಿದ್ದರು.ನಿರ್ಮಲಾ ಸೀತಾರಾಮನ್‌ ಮತ್ತು ಜಗ್ಗೇಶ್‌ ಅವರಿಗೆ ಯಾವ ಶಾಸಕರು ಮತ ಹಾಕಬೇಕು, ಲೆಹರ್‌ ಸಿಂಗ್‌ ಅವರಿಗೆ ಯಾರು ಮತ ಚಲಾಯಿಸಬೇಕು ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ. ಅಲ್ಲದೆ ಮೂರನೇ ಅಭ್ಯರ್ಥಿಗೆ 2ನೇ ಪ್ರಾಶಸ್ತ್ಯದ ಮತ ಹಾಕುವಂತೆಯೂ ನಿರ್ದೇಶನ ನೀಡಲಾಗಿದೆ. ಈ ಮಧ್ಯೆ ಬುಧವಾರವೇ ವಿಪ್‌ ನೀಡಿ, ವಾಪಸ್‌ ಪಡೆಯಲಾಗಿದೆ.

ಕುಮಾರಸ್ವಾಮಿ ಅವರಿಗೆ ನಿಜ ವಾಗಿಯೂ ಬಿಜೆಪಿ ಗೆಲ್ಲ ಬಾರದು ಎಂಬ ಮನಸ್ಸಿದ್ದರೆ ಅವರು ರಾಜ್ಯಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು. ರಾಜ್ಯಸಭಾ ಚುನಾವಣೆ ನನಗೆ ಪ್ರತಿಷ್ಠೆಯಲ್ಲ.
-ಸಿದ್ದರಾಮಯ್ಯ


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ