ಇತ್ತೀಚೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದ ವರೆಗೆ ಹೊಸ ಬಸ್‍ಸೌಲಭ್ಯವನ್ನು ಪ್ರಾರಂಭಿಸಿತ್ತು. ಆದರೆ ಇಂದು ಆ ಸರಕಾರಿ ಬಸ್ ಕೆಟ್ಟು ನಿಂತಿದ್ದು ಕೆಎಸ್‍ಆರ್‍ಟಿಸಿ ಮತ್ತೆ ಡಕೋಟಾ ಬಸ್‍ನ್ನೇ ನೀಡಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚೆ ಬೆಳಗಾವಿಯ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದ ವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಕಳೆದ ವಾರವಷ್ಟೇ ಹೊಸ ಬಸ್ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು.
ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಈ ಬಸ್ ಸೌಲಭ್ಯಕ್ಕೆ ಹಸಿರು ನಿಶಾನೆಯನ್ನು ತೋರಿ ಚಾಲನೆಯನ್ನು ನೀಡಿದ್ದರು. ಆದರೆ ಇಂದು ಬೆಳಗಾವಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬರುವ ವೇಳೆ ಈ ಹೊಸ ಬಸ್ ಕೆಟ್ಟು ನಿಂತಿದ್ದು, ಬಸ್ ಪ್ರಾರಂಭವಾಗಲಿಲ್ಲ. ಇನ್ನು ಪ್ರಯಾಣಿಕರು ಬಸ್‍ನ್ನು ದೂಡಿ ಪ್ರರಾಂಭಿಸಲು ಪ್ರಯತ್ನ ಮಾಡಿದರಾದರೂ ಕೆಲ ಸಮಯದ ವರೆಗೆ ಪ್ರಾರಂಭವಾಗಲಿಲ್ಲ.
ಆದರೆ ಸಾರ್ವಜನಿಕರು ಈ ಬಸ್‍ಗಳು ಡಕೋಟ ಬಸ್ ಅಂತ ಸಾಬೀತಾಗಿದೆ. ಸಾರಿಗೆ ಇಲಾಖೆ ಎನ್ ಡಬ್ಲ್ಯೂ ಕೆ ಆರ್ ಟಿ ಸಿ ಯಾವಾಗಲೂ ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಈ ವೇಳೆ ಬೇಸರ ವ್ಯಕ್ತಪಡಿಸಿದರು.