ಸರ್ಕಾರಿ ನೌಕರರು ಸಮಯ ಪ್ರಜ್ಞೆ ಯಿಂದ ಕಾರ್ಯನಿರ್ವಹಿಸಿದರೆ ಯಾವದೆ ಸಮಸ್ಯೆ ಇಲ್ಲದೆ ಜನರ ಸೇವೆ ಮಾಡಿ ನೆಮ್ಮದಿಯಿಂದ ನಿವೃತ್ತಿ ಹೊಂದಬಹುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಭೀಮಪ್ಪಾ ಲಾಳಿ ಅಭಿಪ್ರಾಯ ಪಟ್ಟರು.
ಅವರು ಇಂದು ಹುಕ್ಕೇರಿ ತಾಲೂಕಾ ಪಂಚಾಯತ ಕಾರ್ಯಾಲಯದ ವ್ಯವಸ್ಥಾಪಕ ರಫೀಕ ಅಹ್ಮದ ಚಟ್ನಿ ಅವರ ಸೇವಾ ನಿವೃತ್ತಿ ಹೊಂದಿದ ಕಾರಣ ಬಿಳ್ಕೋಡುವ ಸಮಾರಂಭದ ಅದ್ಯಕ್ಷತೆ ವಹಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಏರ್ಪಡಿಸಿದ ಬೀಳ್ಕೋಡುವ ಸಮಾರಂಭದಲ್ಲಿ ಸುಮಾರು 40 ವರ್ಷ 5 ತಿಂಗಳಕಾಲ ಸರ್ಕಾರಿ ಸೇವೆಯನ್ನು ಯಾವದೇ ಕಪ್ಪು ಚುಕ್ಕೆ ಇಲ್ಲದೆ ಯಶಸ್ವಿಯಾಗಿ ಪೋರೈಸಿ ನಿವೃತ್ತಿ ಹೊಂದುತ್ತಿರುವ ತಾಲೂಕಾ ಪಂಚಾಯತ ವ್ಯವಸ್ಥಾಪಕ ಆರ್ ಎ ಚಟ್ನಿ ಯವರಿಗೆ ಆರ್ ಡಿ ಪಿ ಆಯ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿಂದ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಚಟ್ನಿ ಯವರ ಕಾರ್ಯವೈಕರಿ ಕುರಿತು ಕೊಂಡಾಡಿದರು.