Breaking News

ದೇಶನೂರ| ನಿರ್ಲಕ್ಷ್ಯಕ್ಕೊಳಗಾದ ಪ್ರೇಮದ ಸಂಕೇತ ‘ನಿರಂಜನಿ ಮಹಲ್‌’

Spread the love

ನೇಸರಗಿ (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮನ ಕಾಲದಲ್ಲಿ ಉಪರಾಜಧಾನಿಯಾಗಿ ಮೆರೆದ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮ ಕಿತ್ತೂರಿನಷ್ಟೇ ಖ್ಯಾತಿ ಪಡೆದಿತ್ತು. ಕಿತ್ತೂರ ಸಂಸ್ಥಾನಕ್ಕೆ ಸಂಬಂಧಿಸಿದ ಅಮರ ಪ್ರೇಮದ ಸಂಕೇತವಾಗಿರುವ ನಿರಂಜನಿ ಮಹಲ್ ನಿರ್ಲಕ್ಷಕ್ಕೆ ಒಳಗಾಗಿದೆ.

 

ದೇಶನೂರ ಗ್ರಾಮವು ಕೋಟೆ-ಕೊತ್ತಲ, ಮಸೀದಿ, ಮಂದಿರ, ಪ್ರೇಮಮಹಲು ಮುಂತಾದ ಐತಿಹಾಸಿಕ ತಾಣಗಳಿಂದ ಮನಸಳೆಯುತ್ತದೆ. ಅಲ್ಲಿನ ನಿರಂಜನ ಮಹಲ್ ಅನ್ನು ಮುನ್ನೂರು ವರ್ಷಗಳಷ್ಟು ಹಿಂದೆ ಕಟ್ಟಲಾಗಿದೆ ಎನ್ನಲಾಗಿದೆ. ಅದು ಅವನತಿಯತ್ತ ಸಾಗಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ.

ಆ ಗ್ರಾಮದ ಗುಡ್ಡದಲ್ಲಿ ರುದ್ರಗಡ ಎಂಬ ಕೋಟೆ ಇದೆ. ಅದು ಕೂಡ ವಿನಾಶದ ಅಂಚಿನಲ್ಲಿದೆ.

ಮಹಲಿನ ಇತಿಹಾಸ:

ಕಿತ್ತೂರನ್ನಾಳಿದ 9ನೇ ದೊರೆ ಮಲವ ರುದ್ರಸರ್ಜ ಉರ್ಫ್ ಫಕೀರ ರುದ್ರಸರ್ಜ ಮುಸ್ಲಿಂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ, ಆಕೆಗಾಗಿ ಈ ಮಹಲ್ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಕಾಶ್ಮೀರದಿಂದ ವಲಸೆ ಬಂದ ಮುಸ್ಲಿ ರಾಜನರ್ತಕಿಯ ಮಗಳಾದ ನೀಲಂ ಅವರನ್ನು ಪ್ರೀತಿಸಿದ ಮಲವ ರುದ್ರಸರ್ಜ, ಆಕೆಯನ್ನು ಮದುವೆಯಾಗಲು ಬಯಸಿದನಂತೆ. ಆಗ ರಾಜಗುರು ಸಂಸ್ಥಾನ ಕಲ್ಮಠದ ಸ್ವಾಮೀಜಿ ಆಕೆಗೆ ‘ನಿರಂಜನಿ’ ಎಂದು ಹೆಸರಿಟ್ಟು ಲಿಂಗ ದೀಕ್ಷೆ ಕೊಡಿಸಿ ಮಲವ ರುದ್ರಸರ್ಜನೊಂದಿಗೆ ಮದುವೆ ಮಾಡಿಸಲಾಗುತ್ತದೆ. ಕಿತ್ತೂರು ಸಂಸ್ಥಾನದ ಆಡಳಿತಕ್ಕೊಳಪಟ್ಟ ದೇಶನೂರ ಗ್ರಾಮದಲ್ಲಿ ಪ್ರೀತಿಯ ರಾಣಿಗಾಗಿ ಸುಂದರ ಮಹಲನ್ನು ನಿರ್ಮಿಸುವ ದೊರೆ ಅದಕ್ಕೆ ‘ನಿರಂಜನಿ ಮಹಲ್’ ಎಂದು ಕರೆದು ದೇಶನೂರಿನಿಂದ ಕಿತ್ತೂರಿನ ರಾಜ್ಯಭಾರ ನಡೆಸುತ್ತಾನೆ ಎನ್ನುತ್ತದೆ


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ