Breaking News

ಇದು ಸಹೋದರತ್ವ- ಬಂಧುತ್ವ ಅಂತ ‘ಶಾಸಕ ಜಮೀರ್ ಅಹ್ಮದ್’ ಮಾಡಿದ್ದೇನು ಗೊತ್ತಾ.? ಈ ವೀಡಿಯೋ ನೋಡಿ.!

Spread the love

ಬೆಂಗಳೂರು: ಜಾತಿ, ಧರ್ಮಗಳನ್ನು ( Caste, religion ) ಮೀರಿದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ. ಅದುವೇ ಮನುಷ್ಯ ಜಾತಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahamad Khan ) ಅಭಿಪ್ರಾಯ ಪಟ್ಟರು.

ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಇಂದು ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬಿಬಿಎಂಪಿಯ ಪೌರ ಕಾರ್ಮಿಕರಿಗೆ ತಮ್ಮ ಕೈಯ್ಯಾರೆ ಭೋಜನ ಉಣಬಡಿಸಿದ ಅವರು, ದಲಿತ ಮತ್ತು ಇಸ್ಲಾಂ ಧರ್ಮ ಗುರುಗಳ ತಟ್ಟೆಯಿಂದ ತುತ್ತು ತೆಗೆದುಕೊಂಡು ಸ್ವೀಕರಿಸಿ, ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದವರು ಎಂದರು.

 

ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು ಎಂದು ಹೇಳುವ ಮೂಲಕ ಸಹೋದರತ್ವದ ಸಂದೇಶ ಸಾರಿದರು.

 

ಇದೇ ಸಂದರ್ಭದಲ್ಲಿ ದಲಿತ ನಾರಾಯಣ ಸ್ವಾಮೀಜಿಗೆ ಕೈತುತ್ತು ತಿನ್ನಿಸಿದಂತ ಶಾಸಕ ಜಮೀರ್ ಅಹ್ಮದ್ ಖಾನ್, ಅವರ ಬಾಯಿಯಲ್ಲಿನ ಎಂಜಲು ಅನ್ನವನ್ನು ತಾವು ತಿಂದು, ಇದು ಕಣ್ರೀ ಸಹೋದರತ್ವ.. ಬಂಧುತ್ವ ಎಂಬುದಾಗಿ ಹೇಳುವ ಮೂಲಕ, ಸಹೋದರತೆಯ ತತ್ವವನ್ನು ಸಾರಿ ಗಮನ ಸೆಳೆದರು. ಆ ವೀಡಿಯೋ ಈ ಕೆಳಗಿದೆ.. 


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ