Breaking News
Home / ರಾಜಕೀಯ / ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

Spread the love

ಬೆಂಗಳೂರು, ಮೇ 17: ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾತೃ ವೃಂದದಡಿ ವರದಿಗಾರರು-2, ಕಂಪ್ಯೂಟರ್ ಆಪರೇಟರ್-4, ಕಿರಿಯ ಸಹಾಯಕ-10, ಬೆರಳಚ್ಚುಗಾರರು-1, ದಲಾಯತ್-23 ಹೀಗೆ ಒಟ್ಟು 43 ಹುದ್ದೆಗಳು ಹಾಗೂ ಸ್ಥಳೀಯ ವೃಂದದಡಿ ವರದಿಗಾರರು-3, ಶೀಘ್ರಲಿಫಿಗಾರರು-2, ಕಿರಿಯ ಸಹಾಯಕರು-3, ಸ್ವಾಗತಕಾರರು-1, ಬೆರಳಚ್ಚುಗಾರರು-3, ಬಡಗಿ-1, ವಾಹನಚಾಲಕರು-8, ದಲಾಯತ್-11, ಸ್ವೀಪರ್-2 ಹೀಗೆ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಅರ್ಜಿ ಸಲ್ಲಿಸಲು ಮೇ 27ರಂದು ಕೊನೆಯ ದಿನವಾಗಿರುತ್ತದೆ. ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇನ್ನಿತರ ಮಾಹಿತಿ ಹಾಗೂ ಪೂರ್ಣ ವಿವರವನ್ನು https://kla.kar.nic.in/assembly/career/career.htm ಲಿಂಕ್ ಅಡಿಯಲ್ಲಿ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

Spread the love ಪಣಜಿ: ಝೋಸ್ಕಾ ಆಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಾಗಿ ಹೇಳಿ ಮಹಿಳೆಯೊಬ್ಬರು 2.71 ಲಕ್ಷ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ