ಬೆಂಗಳೂರು: ಸಾಮಾನ್ಯವಾಗಿ ಗಂಡ, ಹೆಂಡತಿ ಜಗಳ ಉಂಡು ಮಲಗುವರೆಗೂ ಅಂತ ಗಾದೆ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಆದರೆ ಮಹಿಳೆಯೊಬ್ಬರು ಗಂಡನ ಜೊತೆಗೆ ಜಗಳವಾಡಿ ಸಾಯುತ್ತೇನೆ ಅಂತ ಕೆರೆಯಲ್ಲಿ ಕೂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೋರಮಂಗಲ 3ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್ ಹೋಗುವ ವೇಳೆ ಗಂಡನೊಂದಿಗೆ ಮಹಿಳೆ ಜಗಳವಾಡಿದ್ದಾರೆ. ನಂತರ ಕೋಪ ಮಾಡಿಕೊಂಡು ಮಹಿಳೆ ನಾನು ಸಾಯುತ್ತೇನೆ ಎಂದು ಕೋರಮಂಗಲ ಮೂರನೇ ಬ್ಲಾಕ್ ನಲ್ಲಿರುವ ಕೆರೆಯೊಳಗೆ ಕುಳಿತುಕೊಂಡಿದ್ದಾರೆ.
ನಂತರ ಮಹಿಳೆ ಮನವೊಲಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಯಾರಾದರೂ ಹತ್ತಿರ ಬಂದರೆ ಕೆರೆಯೊಳಗೆ ಮುಳುಗಿ ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯ ಮನವೊಲಿಸಿ ಕೆರೆಯಿಂದ ಹೊರಗೆ ಕರೆಸಿದ್ದಾರೆ.
Laxmi News 24×7