ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಮುಂದೆ ಬಿಜೆಪಿಯ ಪರ್ವ, ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಕೇಳುತ್ತಿದ್ದಾರೆ. ಡಬಲ್ ಇಂಜಿನ್ ಮತ್ತೆ ಕೆಲಸ ಮಾಡಲು ರಣತಂತ್ರ ಮಾಡಿದ್ದೇವೆ ಎಂದು ಸಚಿವ ಆರ್.
ಸಂತೋಷ್ ಅವರು ರಾಜ್ಯಕ್ಕೆ ಬಂದು ಚರ್ಚೆ ಮಾಡಿ ಹೋಗಿದ್ದಾರೆ. ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ನಾಯಕರನ್ನ ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ. ಯಾವುದೇ ಷರತ್ತುಗಳನ್ನು ಹಾಕದೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.ಬಿಜೆಪಿಯ ನಾಯಕರು ಮಾಡಿದ್ದಾರೆ.ಇದು ಪ್ರಾಥಮಿಕ ಹಂತ. ಇನ್ನೂ ಹಲವರನ್ನ ಗುರುತಿಸಿದ್ದೇವೆ. ಇದು ನಿನ್ನೆ, ಇಂದಿನ ಮಾತಲ್ಲ.ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಉಸ್ತುವಾರಿ ಅರುಣ್ ಸಿಂಗ್ ಅನುಮತಿ ಪಡೆದು ಕಾರ್ಯಕ್ರಮ ಮಾಡಿದ್ದೇವೆ. ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆ ಮೊದಲನೇ ಹಂತವಾಗಿದೆ. ಎರಡನೇ ಹಂತದಲ್ಲಿ ಬೇರೆ ಭಾಗದಲ್ಲಿ ನಡೆಯಲಿದೆ ಎಂದರು.
ನಮ್ಮ ಕೇಂದ್ರದ ನಾಯಕರು 150+ ಟಾಸ್ಕ್ ಕೊಟ್ಟಿದ್ದಾರೆ. ಯುಪಿ ಯಲ್ಲಿ ಹೇಳುತ್ತಿದ್ದಕ್ಕಿಂತ ಹೆಚ್ಚು ಸೀಟು ಪಡೆದಿದ್ದೇವೆ.ಎಲ್ಲಾ ಸಿಎಂಗಳಿಗೂ ಒಂದು ಹೆಸರು ಕೊಡಲಾಗಿದೆ. ನಮ್ಮ ಸಿಎಂಗೆ ಕಾಮನ್ ಸಿಎಂ ಅಂತ ಹೆಸರು ನೀಡಲಾಗಿದೆ. ಅವರು ಕಾಮನ್ ಬಜೆಟ್ ನೀಡಿದ್ದಾರೆ.ದಾರಿಯಲ್ಲಿ ಹೋಗೋರಿಗೂ ಬಜೆಟ್‌ನಲ್ಲಿ ಕೊಟ್ಟಿದ್ದಾರೆ ಎಂದರು.
Laxmi News 24×7