ಬೆಂಗಳೂರು: ರಾಜ್ಯದ ಅನೇಕ ಕಡೆಯಲ್ಲಿ ಸರ್ಕಾರಿ ಭೂಮಿಯನ್ನು ( Government Land ) ಕಬಳಿಕೆ ಮಾಡಿದಂತ ಆರೋಪ, ಪ್ರಕರಣ ಕೇಳಿ ಬಂದಿದೆ. ಇದೀಗ ಹೀಗೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವಂತ ರೈತರಿಗೇ, ಕಂದಾಯ ಇಲಾಖೆಯಿಂದ ( Revenue Department ) ಆ ಭೂಮಿಯನ್ನು ಗುತ್ತಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಈ ಮೂಲಕ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಗುಡ್ ನ್ಯೂಸ್ ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿದಂತ ಕಂದಾಯ ಸಚಿವ ಆರ್ ಅಶೋಕ್ ( Minister R Ashok ), ಭೂ ಕಬಳಿಕ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಬೆಳೆಗಾರರು ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ಅವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಕ್ರಮ ಕೈಗೊಳ್ಳಲಾಗುವುದು ದರು.
5, 10, 15, 25 ಎಕರೆ ಒತ್ತುವರಿ ಮಾಡಿರುವವರಿಗೆ ಪ್ರತ್ಯೇಕ ದರ ನಿಗದಿ ಪಡಿಸಿ, ಯಾವ ರೀತಿ ಅನುಕೂಲ ಮಾಡಿಕೊಡಬಹುದು ಎನ್ನುವುದು ಕಾಯ್ದೆಯಲ್ಲಿ ಸೇರಿಸಲಾಗುವುದು. ಕೆಲವರು ನೀಡಿದ ಅರ್ಜಿಯಲ್ಲಿ 10 ವರ್ಷದಿಂದ 30 ವರ್ಷವರೆಗೆ ಗುತ್ತಿಗೆ ನೀಡುವಂತೆ ಕೇಳಿದ್ದಾರೆ. ಆ ಬಗ್ಗೆ ಕಾನೂನು ಪ್ರಕಾರ ಆದೇಶ ಮಾಡಲಾಗುತ್ತದೆ ಎಂದರು.
Laxmi News 24×7