ಗದಗ : ಗದಗ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಮಂಡಳಿ ಉಪಾಧ್ಯಕ್ಷ ಸಿಕಂದರ್ ಬಾಪುನವರ್ ವಿರುದ್ಧ ಆತ್ಯಾಚಾರ ಆರೋಪ ಕೇಳಿ ಬಂದಿದೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಗೆ ಕರೆದೊಯ್ದು ಸಿಕಂದರ್ ಅತ್ಯಾಚಾರ ಮಾಡಿದ್ದ ಅನ್ನೋ ಆರೋಪ ಇದೆ.
42 ವರ್ಷದ ಸಿಕಂದರ್, ತಮ್ಮ ಜಮೀನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಆರು ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ್ದಾನಂತೆ. ಮದ್ವೆಯಾಗೋದಾಗಿಯೂ ಬಾಲಕಿಗೆ ನಂಬಿಸಿದ್ದ ಎನ್ನಲಾಗಿದೆ. ತಂದೆ ತಾಯಿ ಇಲ್ಲದ ಅನಾಥ ಬಾಲಕಿಯನ್ನ ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆ ಕುಟುಂಬದವರೆದುರು ಕಾಮುಕನ ನಾಟಕ !
ಕಳೆದ ಏಪ್ರಿಲ್ 17 ತಾರೀಕು ಬಾಲಕಿ ನಾಪತ್ತೆಯಾಗಿದ್ಲು. ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಕರೆಯೊಯ್ದು ಸಿಕಂದರ್ ಅತ್ಯಾಚಾರ ಮಾಡಿದ್ದ. ನಂತ್ರ ಸಂತ್ರಸ್ತೆಯ ಕುಟುಂಬದೊಂದಿಗೆ ಪೊಲೀಸ್ ಸ್ಟೇಷನ್ ಗೆ ಬಂದು, ಬಾಲಕಿ ನಾಪತ್ತೆಯಾದ ಬಗ್ಗೆ ಕಂಪ್ಲೀಟ್ ಕೊಟ್ಟಿದ್ದ ಅಂತಾ ಸಂತ್ರಸ್ತೆ ಕುಟುಂಬದ ಮೂಲಗಳು ತಿಳಿಸಿವೆ.
ಎಪ್ರಿಲ್ 17ನೇ ತಾರೀಕು ಸಂತ್ರಸ್ತೆಯ ಕುಟುಂಬಸ್ಥರನ್ನ ಭೇಟಿಯಾಗಿ ಎರಡು ದಿನ ಕಾಯಿರಿ ಬಾಲಕಿ, ಸ್ನೇಹಿತೆಯರೊಡನೇ ಎಲ್ಲೋ ಹೋಗಿರಬಹುದು ಮನೆಗೆ ಪಾವಾಸ್ ಬರುತ್ತಾಳೆ ಅಂತಾ ಹೇಳಿದ್ದ. ಇದ್ರಿಂದ ಸಂತ್ರಸ್ತೆ ಕುಟುಂಬಸ್ಥರು ಸುಮ್ಮನಾಗಿದ್ರು. 25 ನೇ ತಾರೀಕು ಸೋಮವಾರ ಸಂತ್ರಸ್ತೆ ಸಂಬಂಧಿಕರ ಮನೆಗೆ ವಾಪಾಸ್ ಆಗಿದ್ಲು. ಬಾಲಕಿ ಹೇಳಿಕೆ ಪಡೆದಾಗಲೇ ಸಿಕಂದರ್ ಹೀನ ಕೃತ್ಯದ ಬಗ್ಗೆ ಕುಟುಂಬಸ್ಥರಿಗೆ, ಪೊಲೀಸರಿಗರ ಮಾಹಿತಿ ಸಿಕ್ಕದೆ.