ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ಬಿಜೆಪಿ ಸದ್ಯಕ್ಕೆ ಉಸ್ಸಪ್ಪಾ ಎನ್ನುವಂತಿಲ್ಲ. ಕಮಿಷನ್ ಆರೋಪದಡಿಯಲಿ ಮತ್ತಿಬ್ಬರು ಸಚಿವರು ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೇ?
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ಆರೋಪ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಹೋಗಿತ್ತು.
ಪ್ರಧಾನಿಗಳ ಭೇಟಿಗೆ ಅವಕಾಶ ಸಿಕ್ಕರೆ ದೆಹಲಿಯಲ್ಲಿ ಅವರನ್ನು ಭೇಟಿಯಾಗುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು.
ಆದರೆ, ಪ್ರಧಾನಿ ಕಾರ್ಯಾಲಯದಿಂದ ಅಪಾಯಿಂಟ್ಮೆಂಟ್ ಸಿಗದ ಕಾರಣ, ಗುತ್ತಿಗೆದಾರರ ಸಂಘ ಮುಂದಕ್ಕೆ ಹೆಜ್ಜೆಯನ್ನು ಇಟ್ಟಿರಲಿಲ್ಲ. ಈಗ, ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಕಮಿಷನ್ ಆರೋಪ ಮತ್ತೆ ಮುನ್ನಲೆಗೆ ಬಂದಿದೆ.
ಈಶ್ವರಪ್ಪನವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ (ವಾಟ್ಸಾಪ್) ಬರೆದಿಟ್ಟು ಸಂತೋಷ್, ಬೆಳಗಾವಿಯಿಂದ ಉಡುಪಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ, ಗುತ್ತಿಗೆದಾರರ ಸಂಘ, ಬೊಮ್ಮಾಯಿ ಸರಕಾರದ ಕಮಿಷನ್ ಆರೋಪವನ್ನು ಮತ್ತೆ ಮುಖ್ಯ ವಾಹಿನಿಗೆ ತಂದಿದೆ. ಅದರಲ್ಲೂ ಪ್ರಮುಖವಾಗಿ ಎರಡು ಸಮೃದ್ದ ಇಲಾಖೆಯ ಮೇಲೆ. ಯಾವುದು ಆ ಎರಡು ಸಚಿವಾಲಯ?ಕಮಿಷನ್ ದಂಧೆಯಲ್ಲಿ ಈಶ್ವರಪ್ಪನವರು ಒಬ್ಬರೇ ಇದ್ದಿದ್ದಲ್ಲ
“ಕಮಿಷನ್ ದಂಧೆಯಲ್ಲಿ ಈಶ್ವರಪ್ಪನವರು ಒಬ್ಬರೇ ಇದ್ದಿದ್ದಲ್ಲ, ಇನ್ನೂ ಹಲವಾರು ಸಚಿವರು ಇದರಲ್ಲಿ ಶಾಮೀಲಾಗಿದ್ದಾರೆ. ಬೊಮ್ಮಾಯಿ ಸರಕಾರದಲ್ಲಿ ಆರೋಗ್ಯ ಸಚಿವರು ಡಾ.ಸುಧಾಕರ್, ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆಯ ಸಚಿವರು ಗೋವಿಂದ ಕಾರಜೋಳ. ಕೆಂಪಣ್ಣ ಅವರ ಮಾತಿಗೆ ತೀವ್ರ ಸಿಟ್ಟಾಗಿದ್ದ ಡಾ.ಸುಧಾಕರ್, “ಕೆಂಪಣ್ಣ ಅವರು ಒಂದು ಪಕ್ಷದ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ, ಸಚಿವರನ್ನು ಏಕ ವಚನದಿಂದ ಸಂಭೋದಿಸುತ್ತಾರೆ. ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ”ಎಂದು ಸಚಿವರು ಎಚ್ಚರಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.