ಬೆಳಗಾವಿ- ಸದ್ದಿಲ್ಲದೇ ಬೆಳಗಾವಿಯಲ್ಲಿ ಬೆಟ್ಟಿಂಗ್ ಧಂದೆ ನಡೆಯುತ್ತಲೇ ಇದ್ದು ಇವತ್ತು ಬೆಳಗಾವಿ ಸಿಸಿಬಿ ಪೋಲೀಸರು ಕಾರ್ಯಾಚರಣೆ ನಡೆಸಿ ಬೆಟ್ಟಿಂಗ್ ಬೇಟೆಯಾಡಿದ್ದಾರೆ.
ಸಿಸಿಬಿ ಪೋಲೀಸ್ ಇನೆಸ್ಪೆಕ್ಟರ್ ನಿಂಗನಗೌಡ ಪಾಟೀಲ ನೇತ್ರತ್ವದ ತಂಡ ಇವತ್ತು ದಾಳಿ ಮಾಡಿ ಬೆಟ್ಟಿಂಗ್ ಬುಕ್ಕಿ ಪವನ್ ಕಾಕತ್ಕರ್ ಎಂಬಾತನನ್ನು ಅರೆಸ್ಟ್ ಮಾಡಿ ಬೆಟ್ಟಿಂಗ್ ಬುಕಿಂಗ್ ಗೆ ಬಳಕೆ ಮಾಡುತ್ತಿದ್ದ ಮೋಬೈಲ್ ಹಣ,ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆನ್ನಾಯಿ ಸೂಪರ್ ಕಿಂಗ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯಕ್ಕಾಗಿ ಬೆಟ್ಟಿಂಗ್ ಬುಕ್ ಮಾಡುತ್ತಿರುವಾಗ ಪೋಲೀಸರು ದಾಳಿ ಮಾಡಿದ್ದಾರೆ.ಉದ್ಯಮಬಾಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7