ಬೆಳಗಾವಿ – ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯ ಹಣವನ್ನು ಆರ್ ಟಿ ಜಿ ಎಸ್ ಮೂಲಕ ತನ್ನ ಖಾತೆಗೆ,ತನ್ನ ಹೆಂಡತಿಯ ಖಾತೆಗೆ,ನೆಂಟರ ಖಾತೆಗೆ ವರ್ಗಾಯಿಸಿಕೊಂಡು ಶಾರ್ಜಾಗೆ ಹಾರಲು ಹೊರಟಿದ್ದ ವಂಚಕನನ್ನು ಬೆಳಗಾವಿಯ ಸೈಬರ್ ಪೋಲೀಸರು ಅರೆಸ್ಟ ಮಾಡಿದ್ದಾರೆ.
ದೇಸೂರಿನ ಎಂ.ಜಿ ಅಟೋಮೋಟಿವ್ ಬಸ್ ಆ್ಯಂಡ ಕೋಚ್ ಪ್ರಾ ಲಿ ಕಂಪನಿಯ ಫೈನಾನ್ಸ್ ಕಂಟ್ರೋಲರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಮುಂಬಯಿ ಮೂಲದ ಭವ್ಯ ಹರೇನ್ ದೇಸಾಯಿ ಎಂಬಾತ ಆರ್ ಟಿ ಜಿಎಸ್ ಮೂಲಕ ಕಂಪನಿಯ ಖಾತೆಯಿಂದ 4 ಕೋಟಿ, 41 ಲಕ್ಷಕ್ಕೂ ಅಧಿಕ ಹಣವನ್ನು ತನ್ನ ಖಾತೆಗೆ ತನ್ನ ಹೆಂಡತಿಯ ಖಾತೆಗೆ,ಹಾಗೂ ನೆಂಟರ ಖಾತೆಗಳಿಗೆ ವರ್ಗಾಯಿಸಿ ಶಾರ್ಜಾಗೆ ಹಾರಲು ಹೊರಟಿರುವಾಗ,ಬೆಳಗಾವಿ ಸೈಬರ್ ಕ್ರೈಂ ಠಾಣೆಯ ಪೋಲೀಸ್ ಅಧಿಕಾರಿಗಳ ಮಾಹಿತಿಯ ಮೇರೆಗೆ ಮುಂಬಯಿ ಇಂಟರ್ ನ್ಯಾಶನಲ್ ಏರ್ ಪೋರ್ಟಿನ ಅಧಿಕಾರಿಗಳು ಕೋಟಿ,ಕೋಟಿ ಲೂಟಿ ಮಾಡಿದ ವಂಚಕನನ್ನು ವಶಕ್ಕೆ ಪಡೆದು ಬೆಳಗಾವಿ ಸೈಬರ್ ಪೋಲೀಸರಿಗೆ ಒಪ್ಪಿಸಿದ್ದಾರೆ