ಸರಳ, ಸಜ್ಜನಿಕೆ, ಸ್ನೇಹ ಜೀವಿ, ಮಗು ಥರಾ ಮನಸ್ಸಿನ ಶಿವಣ್ಣ ಮಕ್ಕಳ ಜೊತೆ ಅಕ್ಷರಶಃ ಮಗುವಾಗಿ ಬಿಡ್ತಾರೆ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣರಿಗೆ ಸಂಬಂಧಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ.
ಸಂಬಂಧಿಕರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋ ಹಾಗೂ ವಿಡಿಯೋಗಳು ಇವು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಿವಣ್ಣ, ತೊಟ್ಟಿಲಲ್ಲಿ ಮಲಗಿಕೊಂಡಿದ್ದಾರೆ. ಕಾಲು ಮೇಲೆ ಕಾಲು ಹಾಕಿ ಮಲಗಿ, ಒಂದು ಕೈಯನ್ನ ತಲೆ ದಿಂಬಾಗಿ ಇಟ್ಟುಕೊಂಡು ತಮ್ಮನ್ನ ತಾವೇ ತೂಗಿಕೊಂಡಿದ್ದಾರೆ.