ದೆಹಲಿ: ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹಣಕಾಸು ವರ್ಷ ಏಪ್ರಿಲ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗುತ್ತವೆ.
ಹೀಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ ಸಮಸ್ಯೆಗಳಿಗೆ ಇಂದಿನಿಂದಲೇ ಪರಿಹಾರವನ್ನು ಕಂಡುಕೊಳ್ಳಬಹುದು.
* ಪ್ಯಾನ್-ಆಧಾರ್ ಲಿಂಕ್ ಮಾಡುವುದು
ನೀವು ಮಾರ್ಚ್ 31, 2022 ರೊಳಗೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಪಾನ್ ಕಾರ್ಡನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಅದಕ್ಕಾಗಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ. ಆದರೆ, ದಂಡದ ಮೊತ್ತವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಇದನ್ನು ತಪ್ಪಿಸಲು ನಿಮ್ಮ ಪಾನ್ ಕಾರ್ಡನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ.