Breaking News

ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ!

Spread the love

ಮೈಸೂರು: ಈಕೆಗೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದೆ. 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದರೂ ಮತ್ತೊಬ್ಬನ ಜತೆ ಲವ್ಬಿ ಡವ್ವಿ ಶುರುವಿಟ್ಟುಕೊಂಡು ರೆಡ್​ಹ್ಯಾಂಡ್​ ಆಗೇ ಸಿಕ್ಕಿಬಿದ್ದ ಘಟನೆ ರಾಜೀವ್ ನಗರದಲ್ಲಿ ಸಂಭವಿಸಿದೆ.

ಉದಯಗಿರಿಯ ನಿಧಾಖಾನ್​ಗೆ ಈಗಾಗಲೇ 3 ಮದುವೆ ಆಗಿದೆ.

ಮೊದಲ ಮತ್ತು 2ನೇ ಗಂಡನಿಂದ ದೂರವಾಗಿರುವ ಈಕೆಗೆ, ಟೆಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್​ನ ಪರಿಚಯವಾಗಿತ್ತು. ಮೊದಲ ಮದುವೆ ವಿಷ್ಯ ಮುಚ್ಚಿಟ್ಟ ನಿಧಾಖಾನ್​, 2ನೇ ಮದುವೆ ವಿಷಯವನ್ನ ಮಾತ್ರ ಅಜಾಮ್​ಗೆ ಹೇಳಿದ್ದಳು. ಇವರಿಬ್ಬರೂ 2019ರ ನವಂಬರ್ ಮದುವೆ ಆಗಿದ್ದರು.

ಅಜಾಮ್ ಖಾನ್​ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್​, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್​ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದ್ವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ. ಆತನ ಜತೆ ಈಕೆ ಇರುವಾಗಲೇ ಎಂಟ್ರಿಕೊಟ್ಟ 3ನೇ ಗಂಡ ಅಜಾಮ್​ ಖಾನ್​, ಪತ್ನಿ-ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳಂತೆ.


Spread the love

About Laxminews 24x7

Check Also

ಮೂನ್ನೂರು ರೂಪಾಯಿ ಹಣಕ್ಕಾಗಿ ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ

Spread the loveಬಳ್ಳಾರಿ: ಕುಡಿದ ಮತ್ತಿನಲ್ಲಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಬಳಿ ಇದ್ದ ಮೂನ್ನೂರು ರೂಪಾಯಿ ಕಸಿದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ