ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಗೆದ್ದಿದೆ. ಗೋವಾದಲ್ಲಿ ಇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಗೆಲುವು, ರಾಷ್ಟ್ರ ರಾಜಕಾರಣದ ಮುಂದಿನ ರಾಜಕಾರಣಕ್ಕೆ ಬಿಜೆಪಿಗೆ ಬಲವನ್ನು ನೀಡಿದೆ.
ಈ ಗೆಲುವಿನಲ್ಲಿ ಕರ್ನಾಟಕದ ಇಬ್ಬರು ಸಂಸದರ ಪಾಲು ಬಹಳ ಮಹತ್ವವಾದದ್ದು.
ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಉತ್ತರ ಪ್ರದೇಶದ ಮತ್ತು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಶಿಯವರಿಗೆ ಉತ್ತರಾಖಂಡ್ ಜವಾಬ್ದಾರಿಯನ್ನು ನೀಡಲಾಗಿತ್ತು.
ಶೋಭಾಗೆ ಉತ್ತರ ಪ್ರದೇಶದ ಅವಧ್ ಪ್ರದೇಶದ ಉಸ್ತುವಾರಿಯನ್ನು ನೀಡಲಾಗಿದ್ದರೆ, ಜೋಶಿಗೆ ಸಂಪೂರ್ಣ ಉತ್ತರಾಖಾಂಡ್ ಜವಾಬ್ದಾರಿಯನ್ನು ನೀಡಲಾಗಿತ್ತು. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಇವರಿಬ್ಬರೂ ಹೈಕಮಾಂಡಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.