ಬೆಂಗಳೂರು: ಆರು ವರ್ಷಗಳ ಬಳಿಕ ತಾಯಿ ಮತ್ತು ಮೂಕ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರ ಜೊತೆ ತರಕಾರಿ ಮಾರಾಟಕ್ಕೆ ಭರತ್ ಬಂದಿದ್ದರು. ಆಗ ಭರತ್ ಕೇವಲ 13 ವರ್ಷದವರಾಗಿದ್ದರು. ಈ ವೇಳೆ ನಿಗೂಢವಾಗಿ ಭರತ್ ಕಣ್ಮೆರೆಯಾಗಿದ್ದಾರೆ. ಮೂಗ ಮಗನನ್ನು ಕಾಣದೇ ಕಂಗಲಾಗಿ, ಯಲಹಂಕದ ರೈತ ಸಂತೆಯಲ್ಲಿ ಪಾರ್ವತಮ್ಮ ಅವರು ಹುಡುಕಾಟ ನಡೆಸಿ, ಕೊನೆಗೆ ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಕಾಣೆಯಾದ ಪುತ್ರನಿಗೆ ಹಂಬಲಿಸಿ ಕಂಡ, ಕಂಡ ದೇವರಿಗೆಲ್ಲ ಹರಕೆ ಹೊತ್ತಿದ್ದರು.
ಯಲಹಂಕದಿಂದ ತಪ್ಪಿಸಿಕೊಂಡ ಭರತ್ ಹತ್ತು ತಿಂಗಳ ಬಳಿಕ ನಾಗ್ಪುರ ರೈಲ್ವೆ ನಿಲ್ದಾಣ ತಲುಪಿದ್ದು, ಈ ವೇಳೆ ದಿಕ್ಕು ಕಾಣದೇ ಕಂಗೆಟ್ಟು ಓಡಾಡುತ್ತಿದ್ದ ಭರತ್‍ನನ್ನು ಕಂಡು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ರಕ್ಷಿಸಿದ್ದರು. 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‍ಗೆ ಆಧಾರ್ ಕಾರ್ಡ್ ಮಾಡಿಸಲು ಪುನರ್ ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿ, 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್‍ನನ್ನು ಮಹೇಶ್ ಎಂಬ ಅಧಿಕಾರಿ ಕರೆದೊಯ್ದಿದ್ದರು.