ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಮಹತ್ವದ ಚುನಾವಣಾ ವಿಜಯದ ಒಂದು ದಿನದ ನಂತ್ರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಶುಕ್ರವಾರ ಲಕ್ನೋದ ರಾಜಭವನದಲ್ಲಿ ರಾಜ್ಯಪಾಲ ಆನಂದ್ ಮಣಿಬೆನ್ ಪಟೇಲ್(Anandiben Patel) ಅವರಿಗೆ ರಾಜೀನಾಮೆ ಸಲ್ಲಿಸಿದರು.
ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವ್ರು ಹೋಳಿಗಿಂತ ಮೊದಲು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಮಾರ್ಚ್ 14 ಅಥವಾ 15ರಂದು ನಡೆಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಉನ್ನತಾಧಿಕಾರಿ ನಾಯಕರು ಮತ್ತು ಎನ್ ಡಿಎ ಆಡಳಿತವಿರುವ ರಾಜ್ಯಗಳ ಇತರ ಸಿಎಂಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.