ಬೆಂಗಳೂರು, ಮಾ. 04: ವಾರಂಟಿ ಅವಧಿಯಲ್ಲಿ ಕೆಟ್ಟು ಹೋಗಿದ್ದ ಐಪೋನ್ ರಿಪೇರಿ ಮಾಡಲು ನಿರಾಕರಿಸಿದ ಐಪೋನ್ ಕಂಪನಿಗೆ ಚಿಕ್ಕಮಗಳೂರಿನ ಯುವಕ ಸರಿಯಾಗಿ ಬುದ್ಧಿ ಕಲಿಸಿದ್ದಾನೆ.
ವಾರಂಟಿ ಅವಧಿ ಇದ್ದರೂ ಪೋನ್ ನನ್ನು ರಿಪೇರಿ ಮಾಡಿಕೊಡದೇ ಆಪಲ್ ಐಪೋನ್ ವಿರುದ್ಧ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿ ಚಿಕ್ಕಮಗಳೂರಿನ ಯುವಕ ಜಯ ಗಳಿಸಿದ್ದಾರೆ.
ಅರ್ಜಿದಾರನ ವಾದ ಆಲಿಸಿದ ನ್ಯಾಯಾಲಯ, ವಾರಂಟಿ ಅವಧಿ ಇದ್ದರೂ ಐಪೋನ್ ರಿಪೇರಿ ಮಾಡದ ಆಪಲ್ ಇಂಡಿಯಾ ಸಂಸ್ಥೆಯು, ಯುವಕನಿಗೆ ಹೊಸ ಪೋನ್ ಕೊಡಬೇಕು, ಇಲ್ಲವೇ ಅದರ ಪೂರ್ಣ ಮೊತ್ತವನ್ನು ವಾಪಸು ನೀಡಬೇಕು ಎಂದು ಗ್ರಾಹಕ ವೇದಿಕೆ ನ್ಯಾಯಾಲಯ ಆದೇಶ ಮಾಡಿದೆ. ಜತೆಗೆ ಹತ್ತು ಸಾವಿರ ರೂ. ಪರಿಹಾರವನ್ನು ಕೊಡುವಂತೆ ಆದೇಶ ಮಾಡಿದೆ.