Breaking News

ಕಾಮಗಾರಿ ಹಿನ್ನಲೆ ‘ಆಗುಂಬೆ ಘಾಟ್’ ರಸ್ತೆ 10 ದಿನ ಬಂದ್

Spread the love

ಶಿವಮೊಗ್ಗ: ಈಗಾಗಲೇ ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಹಲವು ಬಾರಿ ಬಂದ್ ಆಗಿದ್ದಂತ ಆಗುಂಬೆ ರಸ್ತೆ , ಈಗ ಮತ್ತೆ ಬಂದ್ 10 ದಿನ ಬಂದ್ ಆಗಲಿದೆ.

ಈ ಕುರಿತಂತೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ-ಹೆಬ್ರಿವರೆಗೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಮಾರ್ಚ್ 5 ರಿಂದ 15ರವರೆಗೆ ಹತ್ತು ದಿನ ಬೆಳಿಗ್ಗೆ 7 ರಿಂದ ಸಂಜೆ 7ರವೆರೆಗೆ ಆಗುಂಬೆ ಘಾಟ್ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಲಘು ವಾಹನಗಳು ತೀರ್ಥಹಳ್ಳಿ – ಕೊಪ್ಪ, ಶೃಂಗೇರಿ, ಮಾಳ, ಕಾರ್ಕಳ ಮೂಲಕ ಉಡುಪಿ ತಲುಪಬಹುದು. ಭಾರಿ ವಾಹನಗಳು ತೀರ್ಥಹಳ್ಳಿ, ಮಾಸಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ ಮೂಲಕ ಉಡುಪಿಗೆ ಈ ಪರ್ಯಾಯ ರಸ್ತೆ ಮಾರ್ಗದ ಮೂಲಕ ತೆರಳುವಂತೆ ಸೂಚಿಸಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ